ಮೈಸೂರು, ಆ.21, 2019 : (www.justkannada.in news) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವರೆಗೆ ಸುಮಾರು 600 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಅದು ಕೇವಲ 27 ದಿನಗಳಲ್ಲಿ ಸಚಿವ ಸಂಪುಟ ಇಲ್ಲದೆ ವರ್ಗಾವಣೆ ಮಾಡ್ತಿದ್ದಾರೆ. ಜತೆಗೆ ಮೂರು ವರ್ಷ ಪೂರೈಸದ ಅಧಿಕಾರಿಗಳನ್ನ ಸಹ ವರ್ಗಾವಣೆ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಆರೋಪಿಸಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರ.ಮಹೇಶ್ ಹೇಳಿದಿಷ್ಟು…
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಬದಲಾಗಿದ್ದಾರೆ ಅವತ್ತಿನ ಯಡಿಯೂರಪ್ಪಗೂ , ಇಂದಿನ ಸಿಎಂ ಯಡಿಯೂರಪ್ಪಗೂ ಸಾಕಷ್ಟು ವ್ಯತ್ಯಾಸ ಆಗಿದೆ . ಆದ್ದರಿಂದಲೇ ವರ್ಗಾವಣೆಯಲ್ಲಿ ನಿರತವಾಗಿರುವುದು. ಈ ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಟ್ರಾನ್ಫರ್ ಮಾಡುತ್ತಿದ್ದಾರೆ ಎಂದು ದೂಷಿಸಿದರು.
ಮಧ್ಯಂತರ ಚುನಾವಣೆ ಬರುವ ಲಕ್ಷಣಗಳೇ ಜಾಸ್ತಿ ಇವೆ. ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಭವಿಷ್ಯ ಬಿಜೆಪಿ ಸಚಿವ ಸಂಪುಟ ರಚನೆ ಮಾಡಿರೋದನ್ನು ನೋಡಿದರೆ ಮಧ್ಯಂತರ ಚುನಾವಣೆ ಬರುತ್ತೆ. ಅರ್ಧ ಕ್ಯಾಬಿನೇಟ್ ಮಾತ್ರ ರಚನೆ ಮಾಡಿದ್ದಾರೆ. ಇದರಿಂದಾಗಿ ಹಲವರಿಗೆ ಅಸಮಾಧಾನ ಶುರುವಾಗಿದೆ. ಸರ್ಕಾರಕ್ಕೆ ಹೆಚ್ಚು ಆಯಸ್ಸು ಇಲ್ಲ ಅನ್ನಿಸುತ್ತಿದೆ. ನನಗೆ ಮಾತ್ರವಲ್ಲ, ರಾಜ್ಯದ ಜನರಿಗೂ ಹೀಗೆಯೇ ಅನ್ನಿಸುತ್ತಿದೆ.
ಮಧ್ಯಂತರ ಚುನಾವಣೆ ಯಾರಿಗೂ ಬೇಡ. ಈಗಲೇ ರಾಜ್ಯ ಪ್ರವಾಹದಲ್ಲಿ ನೊಂದಿದೆ. ಆದ್ದರಿಂದ ಮಧ್ಯಂತರ ಚುನಾವಣೆ ಬೇಡ. ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ
ಅಡಗೂರು ಎಚ್. ವಿಶ್ವನಾಥ್ ಬೇಡಿಕೆ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇತ್ತೀಚೆಗೆ ಯಾರು ಸಭೆ ಸೇರಿದ್ದರು, ಮುಖ್ಯಮಂತ್ರಿಯನ್ನು ಭೇಟಿಯಾಗಿ ಯಾವ ಬೇಡಿಕೆ ಮುಂದಿಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಹಂತದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಮಾಜಿ ಸಚಿವ ಸಾ.ರಾ.ಮಹೇಶ್ ಗಂಭೀರ ಆರೋಪ.
ಹಳ್ಳಿ ಹಕ್ಕಿ ಮತ್ತೆ ಸವಾಲ್ ಹಾಕಿದ ಸಾರಾ ಮಹೇಶ್. ನನ್ನ ಮಾತಿಗೆ ನನ್ನ ಸವಾಲಿಗೆ ನಾನು ಈಗಲು ಬದ್ದ.
ವಿಶ್ವನಾಥ್ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಅನೋದಾದ್ರೆ ಅವರ ನೆಚ್ಚಿನ ದೇಗುಲ ಕಪ್ಪಡಿ ದೇಗುಲಕ್ಕೆ ಬಂದು ಪ್ರಮಾಣ ಮಾಡಲಿ. ಅವರೇ ನಿಗಧಿಪಡಿಸುವ ದೇಗುಲಕ್ಕೆ ಬರಲಿ ಪ್ರಮಾಣ ಮಾಡಲಿ. ಅವರು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲವೆಂದು ಹೇಳಿದರೆ. ಆಗ ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಆಗುತ್ತೇನೆ.
ಕೊಡಗು ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಇದೆ. ಬೇರೆಯವರು ಬಂದು ಹೇಗೆ ನಿರ್ವಹಿಸುತ್ತಾರೆ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಪೈಕಿ ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಿಕೊಳ್ಳಬಹುದಿತ್ತು. ಮೈಸೂರಿನಲ್ಲೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಇದ್ದಾರೆ. ಬೆಂಗಳೂರು ಮೂಲದವರು ಬಂದು ಗಜಪಯಣಕ್ಕೆ ಪೂಜೆ ಮಾಡಲಿದ್ದಾರೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯ ಯಾವೊಬ್ಬರೂ ಸಂಪುಟದಲ್ಲಿ ಇಲ್ಲ. ಪ್ರವಾಹ ಸಂದರ್ಭದಲ್ಲಿ 135 ಕಿ.ಮೀ. ದೂರ ಪ್ರಯಾಣ ಮಾಡಿ ಸಚಿವರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
key words : mysore-sa.ra.mahesh-jds=bsy-transfer-600-27 days