ನವದೆಹಲಿ,ಜನವರಿ,20,2023(www.justkannada.in): ಜಮೈಕಾದ ಒಲಿಂಪಿಕ್ ಓಟಗಾರ ಉಸೇನ್ ಬೋಲ್ಟ್ ಅವರು ಕಿಂಗ್ ಸ್ಟನ್ ಮೂಲದ ಹೂಡಿಕೆ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್ ನಲ್ಲಿ ಹೊಂದಿದ್ದ ಖಾತೆಯಿಂದ $12 ಮಿಲಿಯನ್ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಬ್ಲೂಮ್ ಬರ್ಗ್ ಪ್ರಕಾರ, ಖಾತೆಯಲ್ಲಿ ಕೇವಲ $12,000 ಮಾತ್ರ ಉಳಿದಿದೆ ಎಂದು ಬೋಲ್ಟ್ ಗೆ ಇತ್ತೀಚೆಗೆ ತಿಳಿಸಲಾಯಿತು ಎಂದು ಅವರ ವಕೀಲ ಲಿಂಟನ್ ಪಿ. ಗಾರ್ಡನ್ ಫೋನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಖಾತೆಯು ಬೋಲ್ಟ್ ನ ನಿವೃತ್ತಿ ಮತ್ತು ಜೀವಮಾನದ ಉಳಿತಾಯದ ಭಾಗವಾಗಿದೆ ಎಂದು ಹೇಳಲಾಗಿದೆ. ಜಮೈಕಾ ಅಬ್ಸರ್ವರ್ ಪ್ರಕಾರ, ಹೂಡಿಕೆ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಹಣವನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ. ವಂಚನೆಗೊಳಗಾದ 30 ಕ್ಕೂ ಹೆಚ್ಚು ಹೂಡಿಕೆದಾರರಲ್ಲಿ ಬೋಲ್ಟ್ ಕೂಡ ಸೇರಿದ್ದಾರೆ.
ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಬೋಲ್ಟ್, 100-ಮೀಟರ್ ಮತ್ತು 200-ಮೀಟರ್ ರೇಸ್‌ಗಳಲ್ಲಿ ವಿಶ್ವದಾಖಲೆಗಳನ್ನು ಹೊಂದಿರುವ ವಿಶ್ವದ ಅತ್ಯಂತ ವೇಗದ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
Key words: Usain Bolt –lost- $12 million -fraud.