ನವದೆಹಲಿ,ಜನವರಿ,27,2023(www.justkannada.in): ಶ್ರದ್ಧೆ,ಶ್ರಮ ಏಕಾಗ್ರತೆಯಿಂದ ಓದಿದರೇ ಪರೀಕ್ಷೆ ಎದುರಿಸುವುದು ಸುಲಭ ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು.
ನವದೆಹಲಿಯ ತಾಲ್ ಕಟೋರಾ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ವಿದ್ಯಾರ್ಥಿ ಮಿಥುನ್ ನಯ್ಕ್ ಭಾಗಿಯಾಗಿದ್ದಾರೆ.
ಸಂವಾದದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಮನಸು ಅರಿಯಲು ನನಗೆ ಅವಕಾಶ ಸಿಕ್ಕಿದೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ . ಕ್ರಿಕೆಟ್ ಸ್ಟೇಡಿಯಂನಲ್ಲಿ ಆಟಗಾರರಿಗೆ ಆಟ ಮೇಲೆ ಏಕಾಗ್ರತೆ ಇರುತ್ತದೆ. ಬ್ಯಾಟ್ಸಮನ್ ಗೆ ಬಾಲ್ ಮೇಲೆ ಏಕಾಗ್ರತೆ ಇರುತ್ತದೆ. ಪ್ರೇಕ್ಷಕರು ಕೂಗುತ್ತಿದ್ದರೂ ಆಟಗಾರನಿಗೆ ಬಾಲ್ ಮೇಲೆ ಏಕಾಗ್ರತೆ ಇರುತ್ತದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮೇಲೆ ಏಕಾಗ್ರತೆ ಇರಬೇಕು. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ತಾಳ್ಮೆ ಏಕಾಗ್ರತೆ ಕಳೆದುಕೊಳ್ಳಬಾರದು. ಶಿಕ್ಷಣದ ಜೊತೆ ನಿಮ್ಮ ಗುರಿಯೂ ಸ್ಪರ್ಷವಾಗಿರಬೇಕು ಎಂದು ಸಲಹೆ ನೀಡಿದರು.
ಸಮಯ ನಿರ್ವಹಣೆ ಒತ್ತಡ ನಿಭಾಯಿಸುವ ಬಗ್ಗೆ ಮಾಹಿತಿಯನ್ನ ಪೋಷಕರು ನೀಡಬೇಕು. ಪರೀಕ್ಷೆಗಳನ್ನ ಎದುರಿಸಲು ಯಾವುದೇ ಶಾರ್ಟ್ ಕಟ್ ಇಲ್ಲ. ಶ್ರದ್ಧೇ ಶ್ರಮ, ಏಕಾಗ್ರತೆಯಿಂದ ಓದಿದದರೇ ಪರೀಕ್ಷೆ ಸುಲಭ ಎಂದು ಪ್ರಧಾನಿ ಮೋದಿ ತಿಳಿಸಿದು.
ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ ಸಾಮರ್ಥ್ಯ ಇರುತ್ತದೆ. ಆದರೆ ಅದನ್ನು ಗುರುತಿಸುವ ಕೆಲಸ ಶಿಕ್ಷಕರು ಪೋಷಕರು ಮಾಡಬೇಕು. ಮಕ್ಕಳನ್ನ ಪ್ರತಿಭೆಯನ್ನ ಗುರುತಿಸಿ ಪ್ರೋತ್ಸಾಹಿಸಿ ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.
Key words: easy – face – exam – diligence – concentration-PM-Modi – students.