ಮೈಸೂರು,ಜನವರಿ,27,2023(www.justkannada,in): ಇತ್ತೀಚೆಗೆ ಲಿಂಗೈಕ್ಯರಾದ ಶತಮಾನದ ಸಂತ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಗುರುಸಿದ್ಧೇಶ್ವರರಿಗೆ ನೆನಪುಗಳ ನುಡಿಮಲ್ಲಿಗೆ’ ಕಾರ್ಯಕ್ರಮವನ್ನ ನಾಳೆ(ಜನವರಿ 28) ಆಯೋಜನೆ ಮಾಡಲಾಗಿದೆ.
ಶನಿವಾರ, ಸಂಜೆ 6 ಗಂಟೆಗೆ ನಿವೇದಿತ ನಗರದಲ್ಲಿರುವ ಎಸ್.ಆರ್. ಸುಬ್ಬರಾವ್ ಉದ್ಯಾನವನದಲ್ಲಿ ವೀರವನಿತೆ ರಾಣಿಚೆನ್ನಮ್ಮ ಸ್ವಯಂ ಸೇವಾ ಸಂಘ, ಅನಿಕೇತನ ಸೇವಾ ಟ್ರಸ್ಟ್, ಕುವೆಂಪುನಗರ, ನಾಗರಿಕ ಯೋಗ ಕ್ಷೇಮಾಭಿವೃದ್ಧಿ ಸಂಘ, ನಿವೇದಿತನಗರ, ಆನಂದನಗರ ಕ್ಷೇಮಾಭಿವೃದ್ಧಿ ಸಂಘ, ಆನಂದನಗರ, ಸಿಎಫ್ಟಿಆರ್ಐ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಶಾರದಾದೇವಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಬಸವೇಶ್ವರ ಸೇವಾ ಸಮಿತಿ, ರಾಮಕೃಷ್ಣನಗರ, ವೀರಶೈವ ಸ್ನೇಹ ಬಳಗ, ಕುವೆಂಪುನಗರ, ಬಸವ ಬಳಗ ಸೇವಾ ಟ್ರಸ್ಟ್, ಬೋಗಾದಿ, ಬಿಇಎಂಎಲ್ ಬಸವ ಸಮಿತಿ, ಕದಳಿ ಮಹಿಳಾ ವೇದಿಕೆ, ಸ್ಪಂದನ ಮಹಿಳಾ ಬಳಗ ಹಾಗೂ ವಿವಿಧ ಸಂಘಗಳು ಮತ್ತು ಭಕ್ತವೃಂದದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾಹಿತಿಗಳು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೊ. ಮಲೆಯೂರು ಗುರುಸ್ವಾಮಿ, ಸಂಸ್ಕೃತಿ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಪ್ರೊ. ಎಂ. ಕೃಷ್ಣೇಗೌಡರು, ಅಂಕಣಕಾರರಾದ ಕುಸುಮಾ ಆಯರಹಳ್ಳಿ, ಇವರುಗಳಿಂದ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಗುತ್ತದೆ.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಲಿ ಹಾಗೂ ಮಾಜಿ ನಗರಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಭಕ್ತವೃಂದದವರು ಉಪಸ್ಥಿತರಿರುವರು ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್ ಜಗದೀಶ್, ಶರತ್ ಮೆಡಿಕಲ್ಸ್ ನ ಆಯರಹಳ್ಳಿ ಪಿ.ವಿರೂಪಾಕ್ಷ ತಿಳಿಸಿದ್ದಾರೆ.
Key words: Tomorrow – Mysore -Sri Gurusiddheshwara- Remembrance- program