ಬೆಳಗಾವಿ,ಜನವರಿ,30,2023(www.justkannada.in): ತಮ್ಮ ವಿರುದ್ಧದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ. ಹಾಗಯೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನನ್ನ ಮತ್ತು ಡಿಕೆ ಶಿವಕುಮಾರ್ ಸಂಬಂಧ ಹಾಳಾಗಲು ಆ ಗ್ರಾಮೀಣ ಭಾಗದ ಶಾಸಕಿಯೇ ಕಾರಣ. ಡಿಕೆ ಶಿವಕುಮಾರ್ ಅಂಡ್ ಟೀಮ್ ಮತ್ತು ವಿಷಕನ್ಯೆಯಿಂದ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಿಸ್ಟರ್ ಡಿಕೆ ಶಿವಕುಮಾರ್ ರಾಜಕಾರಣಿ ಆಗಲು ನಾಲಾಯಕ್. ವೈಯಕ್ತಿಕ ಜೀವನಕ್ಕೆ ತೊಂದರೆಯಾದರೇ ಸಹಾಯ ಮಾಡಬೇಕು. ಆದರೆ ಷಡ್ಯಂತ್ರ ಮಾಡಿ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದರು. ಒಬ್ಬ ಮಹಿಳೆ ಮೂಲಕ ನನ್ನ ತೇಜೋವಧೆ ಮಾಡಿದಡಿಕೆಶಿ . ಸಿಡಿ ಪ್ರಕರಣ ಸಂಬಂಧ ನನ್ನ ಬಳಿ 128 ಸಾಕ್ಷ್ಯಗಳಿವೆ. ಯಾವುದೇ ದಾಖಲೆ ಬಿಡುಗಡೆ ಮಾಡಲ್ಲ. ಸಿಡಿ ಪ್ರಕರಣದ ಯುವತಿ ನರೇಶ್ ಸೇರಿದಂತೆ 6 ಜನರನ್ನ ಬಂಧಿಸಿ. ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ. ಎಲ್ಲಾ ದಾಖಲೆಗಳನ್ನ ಸಿಬಿಐಗೆ ನೀಡುತ್ತೇನೆ ಎಂದರು.
ಡಿಕೆ ಶಿವಕುಮಾರ್ ಈಗ ಆಗರ್ಭ ಶ್ರೀಮಂತ. ನಾನು ನೋಡಿದಾಗ ಡಿಕೆಶಿ ಚಪ್ಪಲಿ ಹಾಕುತ್ತಿದ್ದ. ಆಗ ಆತ ಬರೀ ಜಂಗ್ಲಿ ಮನುಷ್ಯ. ಈಗ ಸಾವಿರಾರು ಕೊಟಿ ಒಡೆಯ. ಮಾರ್ಚ್ 21 ರಂದು ನನ್ನ ಸಿಡಿ ಬಿಡುಗಡೆ ಮಾಡಿ ಹೆಸರು ಕೆಡಸಿದ. ಡಿಕೆಶಿ ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾನೆ ಎಂದು ಕಿಡಿಕಾರಿದರು.
ಗ್ರಾಮೀಣ ಶಾಸಕಿಯಿಂದಲೇ ಡಿಕೆಶಿ ಹಾಗೂ ನನ್ನ ಸಂಬಂಧ ಹಾಳಾಯಿತು. ಅಣ್ಣತಮ್ಮಂದಿರಂತಿದ್ದ ನಮ್ಮಿಬ್ಬರ ಸಂಬಂಧ ಹಾಳಾಯಿತು. ಕಾಂಗ್ರೆಸ್ ಪಕ್ಷ ಬಿಡದಂತೆ ಡಿಕೆಶಿ ದಂಪತಿ ಮನವೊಲಿಸಿದ್ದರು ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವಿ ಮಾಡಿದ್ದರು. ಆದರೆ ನಿನ್ನ ಪತಿ ಸರಿಯಲ್ಲ ತಂಗಿ ಹೀಗಾಗಿ ಕಾಂಗ್ರೆಸ್ ತೊರೆಯುವೆ ಎಂದು ಡಿಕೆ ಶಿವಕುಮಾರ್ ಪತ್ನಿಗೆ ತಿಳಿಸಿದ್ದೆ ಎಂದರು.
2000 ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣಗಳು ಬರುತ್ತಿವೆ. ಷಡ್ಯಂತ್ರ ಮಾಡಿ ಅಧಿಕಾರಿಗಳು, ರಾಜಕಾರಣಿಗಳ 120ಕ್ಕೂ ಹೆಚ್ಚು ಜನರ ಸಿಡಿ ಮಾಡಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಕೆಲಸ ಮಾಡಿಕೊಂಡಿದ್ದಾರೆ. ಕೋ ಅೊರೇಟಿವ್ ಬ್ಯಾಂಕ್ ನಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
Key words: KPCC-President-DK Shivakumar-Congress –destroyed-Ramesh Jarakiholi