ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ ಆರೋಪ: ಎಂ.ಎನ್ ದೊರೆಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹ.

ಮೈಸೂರು,ಜನವರಿ,31,2023(www.justkannada.in): ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ ಮಾಡಿರುವ ಎಸ್.ಜೆ.ಕೆ ಬಿಲ್ಡರ್ಸ್ ಡೆವಲಪರ್ ನ ವ್ಯವಸ್ಥಾಪಕ ಪಾಲುದಾರ ಎಂ.ಎನ್ ದೊರೆಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು. ವಂಚನೆಗೆ ಒಳಗಾಗಿರುವ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ವಕೀಲ ಗಂಗಾಧರ್ ಗೌಡ ಮನವಿ ಮಾಡಿದರು.

ನಿವೇಶನ ನೀಡುವುದಾಗಿ ಗ್ರಾಹಕರಿಂದ ಹಣ ಪಡೆದು ಯಾವುದೇ ನಿವೇಶನ ನೀಡದೆ ಎಂ.ಎನ್ ದೊರೆಸ್ವಾಮಿ ವಂಚನೆ ಮಾಡಿದ್ದಾರೆ.  ಮೈಸೂರಿನ‌ ಕಸಬಾ ಹೋಬಳಿಯ ಹಳೆ ಕೆಸರೆಯ 54/2, ,54/3, 54/4 ರಲ್ಲಿ ನಿವೇಶನ ನೀಡುವುದಾಗಿ ಹೇಳಿದ್ದ ದೊರೆಸ್ವಾಮಿ,  ಸುಮಾರು 600 ರಿಂದ 700ಜನರಿಗೆ ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ.

ಹಣ ಪಡೆದು ಯಾವುದೇ  ನಿವೇಶನ ನೀಡದೆ ದೊರೆಸ್ವಾಮಿ ತಲೆ ತಪ್ಪಿಸಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ  ಈ ಕುರಿತು ಗಮನ ಹರಿಸಿ ಹಣ ನೀಡಿ ವಂಚನೆಗೆ ಒಳಗಾಗಿರುವ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ವಕೀಲರಾದ ಗಂಗಾಧರ್ ಗೌಡ ಮನವಿ ಮಾಡಿದರು.

Key words: mysore-fraud  – giving- land- action –against- MN Doreswamy.