ನವದೆಹಲಿ,ಫೆಬ್ರವರಿ,8,2023(www.justkannada.in): ದೇಶದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯವಾಗಿದೆ. ಯುಪಿಎ ಅವದಿಯಲ್ಲಿ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿತ್ತು. ಈಗ ಅರ್ಥವ್ಯವಸ್ಥೆ ಸರಿಯಾಗಿರುವುದನ್ನ ಕಂಡು ಕೆಲವರಿಗೆ ನಿರಾಸೆಯಾಗಿದೆ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿ ವಿಪಕ್ಷಗಳನ್ನ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, 2004ರಿಂದ 2014ರವರೆಗೆ ಭಾರತೀಯ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಈಗ ಈಗ ಅರ್ಥವ್ಯವಸ್ಥೆ ಸುಧಾರಿಸಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ದ್ವೇಷದ ಭಾವನೆಯ ರಾಜಕಾರಣ ಈಗ ಬಯಲಾಗಿದೆ. ದ್ವೇಷದ ಹಿಂದಿನ ಸತ್ಯ ಎಲ್ಲರ ಮುಂದೆ ಬಯಲಾಗಿದೆ ಎಂದು ಹೇಳಿದರು.
ಕ್ರಮೇಣವಾಗಿ ದೇಶ ಭ್ರಷ್ಟಾಚಾರದಿಂದ ಮುಕ್ತವಾಗಿದೆ. ದೇಶದಲ್ಲಿ ಕುಟುಂಬ ರಾಜಕಾರಣ ಭ್ರಷ್ಟಾಚಾ ಅಂತ್ಯವಾಗಿದೆ. ವಿಶ್ವದ ಸಮೃದ್ಧ ದೇಶಗಳಲ್ಲಿ ಭಾರತ ಒಂದಾಗಿದೆ. ಈ ಬಾರಿ ಭಾರತಕ್ಕೆ ಜಿ-20 ಅಧ್ಯಕ್ಷತೆ ಸಿಕ್ಕಿರುವುದರಿಂದ ಕೆಲವರಿಗೆ ದುಃಖವಾಗುತ್ತಿದೆ . ಅನೇಕ ದೇಶಗಳು ನಿರುದ್ಯೋಗ ಹಸಿವು ಬಡತನದಿಂದ ಬಳಲುತ್ತಿವೆ. ಭಾರತ ವಿಶ್ವದ 5ನೇ ಬಲಿಷ್ಠ ಆರ್ಥಿಕತೆ ಹೊಂದಿದೆ. ಭಾರತ ವಿಶ್ವದಲ್ಲೇ ಸಮೃದ‍್ಧ ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ನಮಗೆ ಜಿ-20 ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದು ದೇಶದ ಜನತೆಗೆ ಸಿಕ್ಕ ಗೌರವ ಆದರೆ ಇದು ಸಿಕ್ಕಿರುವುದು ಕೆಲವರಿಗೆ ದುಃಖವಾಗಿದೆ. ಯಾರಿಗೆ ದುಃಖವಾಗಿದೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.
ಕೆಲವರು ದೇಶದ ಪ್ರಗತಿಯನ್ನ ಸ್ವೀಕಾರ ಮಾಡುವುದಿಲ್ಲ 140 ಕೋಟಿ ಜನರಿಗೆ ಏನು ಸಿಕ್ಕಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಲ್ಲ. ಇಡೀ ಭಾರತ ಕನಸು ನನಸಾಗಲು ಸಂಕಲ್ಪ ತೊಟ್ಟಾಗಿದೆ. ಈ ರೀತಿಯ ನಿರಾಶೆಯ ಹಿಂದೆ ಬೇರೆಯೇ ರೀತಿಯ ಲೆಕ್ಕಾಚಾರವಿದೆ ಎಂದರು.
ಇನ್ನು ಪ್ರಧಾನಿ ಮೋದಿ ಭಾಷಣದ ವೇಳೆ ಗೌತಮ್ ಅದಾನಿ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಆರ್ ಎಸ್ ಕಾಂಗ್ರೆಸ್ ಸಭಾತ್ಯಾಗ ಮಾಡಿದವು.
Key words: End –corruption- family politics-PM Modi-lokasabha