ಬೆಂಗಳೂರು,ಫೆಬ್ರವರಿ,22,2023(www.justkannada.in): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ ಡಿ.ರೂಪಾ ಅವರು ಇದೀಗ ಮತ್ತೊಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.
ಗಂಗರಾಜು ಆರೋಪ ನಿರಾಕರಿಸಿರುವ ಡಿ.ರೂಪಾ ಅವರು, ಭ್ರಷ್ಟಾಚಾರದ ವಿರುದ್ದ ಹೋರಾಡಬೇಡಿ ಎಂದಿಲ್ಲ. ನಾನು ಎತ್ತಿರು ವ ವಿಷಯದ ಬಗ್ಗೆ ಗಮನಹರಿಸಲಿ ಒಂದೇ ಮಾದರಿಯಲ್ಲಿ ನಡೆದ ಹಲವು ಪ್ರಕರಣಗಳ ಬಗ್ಗೆ ಗಮನಹರಿಸಲಿ. ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಾದರೇ ರಾಜ್ಯದಲ್ಲಿ ಓರ್ವ ಐಎಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು ತಮಿಳುನಾಡಿನಲ್ಲಿ ಓರ್ವ ಐಪಿಎಸ್ ಅಧಿಕಾರಿ ಮೃತಪಟ್ಟರು ಕರ್ನಾಟಕದಲ್ಲಿ ಐಎಎಸ್ ದಂಪತಿಯೂ ಡಿವೋರ್ಸ್ ಪಡೆದಿದ್ದಾರೆ. ಆದರೆ ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಇದೆಕ್ಕೆಲ ಕಾರಣ ಯಾರು ಅವವರನ್ನ ಕೇಳಿ ಎಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.
ಇಲ್ಲದಿದ್ದರೇ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತದೆ. ನಾನು ಧೈರ್ಯವಂತ ಮಹಿಳೆ. ನಾನು ಹೋರಾಡುತ್ತೇನೆ ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ ಅದನ್ನ ಮುಂದುವರೆಸೋಣ ಎಂದು ರೂಪಾ ಡಿ. ಮೌದ್ಗಿಲ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
Key words: IPS-D.Rupa-IAS-Rohini sinduri-facebook-post