ಮೈಸೂರು,ಫೆಬ್ರವರಿ,22,2023(www.justkannada.in): ಇರಾನಿ ಯುವತಿಗೆ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಆದಿಲ್ ಖಾನ್ ದುರಾನಿಯನ್ನ ಫೆ. 27 ರವರೆಗೆ ಪೋಲಿಸ್ ಕಸ್ಟಡಿಗೆ ನೀಡಿ ಮೈಸೂರು ಕೋರ್ಟ್ ಆದೇಶಿಸಿದೆ.
ಇರಾನಿ ಯುವತಿಗೆ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಆದಿಲ್ ಖಾನ್ ದುರಾನಿಯನ್ನ ಪೊಲೀಸರು ಕೋರ್ಟ್ ಹಾಜರಿಪಡಿಸಿದ್ದರು. ಫೆ. 27 ರವರೆಗೆ ಆದಿಲ್ ಖಾನ್ ದುರಾನಿಯನ್ನ ಪೋಲಿಸ್ ಕಸ್ಟಡಿಗೆ ನೀಡಿದ ಕೋರ್ಟ್ ಸದ್ಯಕ್ಕೆ ವಿಚಾರಣೆ ಫೆಬ್ರವರಿ 27ಕ್ಕೆ ಮುಂದೂಡಿದೆ.
ಇನ್ನು ಮೈಸೂರು ಕೋರ್ಟ್ ಗೆ ರಾಖಿ ಸಾವಂತ್ ಕೂಡ ಹಾಜರಾಗಿದ್ದರು. ನಂತರ ಮಾಧ್ಯಮಗಳ ಮುಂದೆ ಮಾತನಾಡಿ ರಾಖಿ ಸಾವಂತ್, ನಾನು ಕಾನೂನು ಬದ್ಧವಾಗಿ ಮದುವೆಯಾಗಿದ್ದೇನೆ. ಹಿಂದೂ ಆಗಿದ್ದವಳು ಅವನಿಗೋಸ್ಕರ ಮುಸ್ಲಿಂ ಧರ್ಮಕ್ಕೂ ಸೇರಿಕೊಂಡಿದ್ದೇನೆ ಫಾತಿಮ ಅಂತ ಹೆಸರನ್ನೂ ಬದಲಿಸಿಕೊಂಡಿದ್ದೇನೆ. ನನ್ನಿಂದ ಸುಮಾರು 1.70 ಕೋಟಿ ಹಣ ಪಡೆದು ಹಣವನ್ನೂ ಕೊಡುತ್ತಿಲ್ಲ. ನನ್ನನ್ನ ಅವರ ಮನೆಯವರು ಮನೆಗೂ ಸೇರಿಸುತ್ತಿಲ್ಲ. ನಾನು ಎಲ್ಲಿಗೆ ಹೋಗಲಿ ನನಗೆ ನ್ಯಾಯ ಕೊಡಿಸಿಕೊಡಿ ಎಂದು ಮಾಧ್ಯಮಗಳ ಮುಂದೆ ಗಳಗಳನೆ ಕಣ್ಣೀರಾಕಿದರು.
ನನ್ನ ಪತಿಯನ್ನ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದ್ದಾರೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕು ಸಿಗಬಾರದು. ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ. ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದರಿಂದ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ ನನಗೆ ನ್ಯಾಯ ಕೊಡಿಸಿ ಎಂದು ರಾಖಿ ಸಾವಂತ್ ಮನವಿ ಮಾಡಿಕೊಂಡರು.
Key words: mysore- Court – Adil Khan – police custody- Rakhi Sawant – justice.