ಹಾಸನ,ಫೆಬ್ರವರಿ,24,2023(www.justkannada.in): 50 ಸಾವಿರ ಲೀಡ್ ನಿಂದ ರೇವಣ್ಣರನ್ನ ಸೋಲಿಸುತ್ತೇನೆ ಎಂದಿದ್ದಾರೆ. ದುಡ್ಡಿನ ಅಹಂಕಾರದಲ್ಲಿ ಗೇಲ್ತಿನಿ ಎಂದ್ರೆ ನಡೆಯೋಲ್ಲ. ದೇವರು ಒಮ್ಮೆ ಕಣ್ಣು ಬಿಟ್ಟರೇ ಏನು ನಡೆಯಲ್ಲ ಎಂದು ಟಾಂಗ್ ನೀಡಿದರು.
ಹಾಸನ ಜಿಲ್ಲೆ ನಿಟ್ಟೂರಿನಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ, ಹಾಸನದಲ್ಲಿ ಅಭ್ಯರ್ಥಿ ಯಾರು ಅನ್ನೋದು ಮುಖ್ಯ ಅಲ್ಲ. ನಮಗೆ ನಮ್ಮ ಕಾರ್ಯಕರ್ತರು ಉಳಿಯೋದು ಮುಖ್ಯ. 50 ಸಾವಿರ ಲೀಡ್ ನಿಂದ ರೇವಣ್ಣರನ್ನ ಸೋಲಿಸುತ್ತೇನೆ ಎಂದಿದ್ದಾರೆ. ದುಡ್ಡಿನ ಅಹಂಕಾರದಲ್ಲಿ ಚುನಾವಣೆ ನಡೆಸುತ್ತೇನೆ ಎಂದರೇ ಏನು ನಡೆಯಲ್ಲ. ಜನರಿಗೆ ಯಾವ ರೀತಿ ತೊಂದರೆ ಕೊಟ್ಟದ್ದಾರೆ ಗೊತ್ತಿದೆ ಎಂದು ಹೇಳಿದರು.
ಈ ನಡುವೆ ಭವಾನಿ ರೇವಣ್ಣ ಮಾತನಾಡಿ, ಕುಮಾರಣ್ಣ ಮುಂದಿನ ಸಿಎಂ ಆಗುತ್ತಾರೆ. ಎಚ್ ಡಿಕೆ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘದ ಸಾಲಮನ್ನಾ ಮಾಡುತ್ತಾರೆ. ನಾವೆಲ್ಲರೂ ಹೆಚ್.ಡಿಕೆ ಕೈ ಬಲಪಡಿಸೋಣ. ಹಾಸನದಲ್ಲಿ ಜೆಡಿಎಸ್ ಬೆಂಬಲಿಸಿ ಎಂದು ಕರೆ ನೀಡಿದರು.
Key words: H.D. Revanna -Tong – Hassan-MLA-Prithamgowda