ಬೆಂಗಳೂರು,ಮಾರ್ಚ್,4,2023(www.justkannada.in): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿ ಅಂದರೇ ಭ್ರಷ್ಟಚಾರ ಜನತಾ ಪಾರ್ಟಿ , ರಾಜ್ಯದಲ್ಲಿ ಇರುವುದು ಭ್ರಷ್ಟಾಚಾರದ ಸರ್ಕಾರ. ಪ್ರತಿಯೊಂದು ಕೆಲಸಕ್ಕೂ 40 ಪರ್ಸೆಂಟ್ ಕಮಿಷನ್ ಕೇಳ್ತಾರೆ . ರಾಜ್ಯದ ಜನರ ಹಣವನ್ನೂ ಲೂಟಿ ಮಾಢುತ್ತಿದ್ದಾರೆ ಕಮಿಷನ್ ನೀಡಲಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕಮಿಷನ್ ಬಗ್ಗೆ ಮೋದಿಗೆ ಕೆಂಪಣ್ಣ ದೂರು ನೀಡದ್ದಾರೆ ಆದರೆ ಪ್ರಧಾನಿ ಗಳಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಮಾಡಾಳ್ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ ಇದಕ್ಕೆ ಸಿಎಂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
Key words: Randeep Singh Surjewala- demands – CM -answer – discovery – crores