ಮೈಸೂರು, ಮೇ 11, 2019 : (www.justkannada.in news) : ನಗರದ ರಿಂಗ್ ರಸ್ತೆಯಲ್ಲಿ ಗಂಡು ನವಿಲೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನದಲ್ಲಿದ್ದ ಸವಾರರಿಬ್ಬರು ಗಂಭೀರ ಗಾಯಗೊಂಡ ವಿಚಿತ್ರ ಹಾಗೂ ನಂಬಲಸಾಧ್ಯವಾದ ಘಟನೆ ನಡೆದಿದೆ.
ನಗರದ ದಟ್ಟಗಳ್ಳಿ ರಿಂಗ್ ರೋಡ್ ನಲ್ಲೇ ಶನಿವಾರ ಬೆಳಗ್ಗೆ ಈ ಘಟನೆ ನಡೆದಿರುವುದು. ದಿಚಕ್ರವಾಹನದಲ್ಲಿ ತೆರಳುತ್ತಿದ್ದ ಸವಾರರಿಬ್ಬರಿಗೆ ಅಚಾನಕ್ಕಾಗಿ ಹಾರಿ ಬಂದ ಗಂಡು ನವಿಲು ಡಿಕ್ಕಿ ಹೊಡೆದು ಪರಿಣಾಮ ನಿಯಂತ್ರಣ ತಪ್ಪಿ ವಾಹನ ಓಡಿಸುತ್ತಿದ್ದ ಯುವಕ ಸ್ಥಳದಲ್ಲೇ ಬಿದ್ದರೆ, ಸ್ಕೂಟರ್ ಮಾತ್ರ ಚಾಲಕನಿಲ್ಲದೆ 100 ಮೀಟರ್ ಗಳ ದೂರ ಕ್ರಮಿಸಿ ಬಳಿಕ ಕೆಳಗಡೆ ಬಿದ್ದಿದೆ. ಈ ವೇಳೆ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಸಹ 100 ಮೀಟರ್ ಗಳ ವರೆಗೆ ಸ್ಕೂಟರ್ ನಲ್ಲಿ ಸಂಚರಿಸಿದ್ದು ವಿಚಿತ್ರವಾಗಿದೆ.
ಮೈಸೂರು ಹೊರ ವಲಯದ ಕೋರ್ಗಳ್ಳಿ ಸಮೀಪದ ದನಗಳ್ಳಿ ಗ್ರಾಮದ ಈ ಯುವಕ-ಯುವತಿ ಸ್ಕೂಟರ್ ನಲ್ಲಿ ರಿಂಗ್ ರಸ್ತೆ ಮಾರ್ಗವಾಗಿ ಗ್ರಾಮಕ್ಕೆ ತೆರಳುತ್ತಿದ್ದರು. ಆಗ ದಟ್ಟಗಳ್ಳಿಯಿಂದ ಆರ್.ಟಿ.ನಗರಕ್ಕೆ ತೆರಳುವ ಮಾರ್ಗದಲ್ಲಿರುವ ಊರುಕಾತೇಶ್ವರಿ ದೇವಾಲಯಕ್ಕೆ ಕೆಲ ಮೀಟರ್ ಗಳ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಯ ಮತ್ತೊಂದು ಮಗ್ಗುಲುನಿಂದ ಬೃಹತ್ ಗಾತ್ರದ ರೆಕ್ಕೆ( ಗರಿ)ಯೊಂದಿಗೆ ಗಂಡು ನವಿಲೊಂದು ಅಚಾನಕ್ಕಾಗಿ ಹಾರಿ ಬಂದು ವಾಹನ ಸವಾರನ ಮೇಲೆ ನುಗ್ಗಿತು . ಇದನ್ನು ನಿರೀಕ್ಷಿಸದ ವಾಹನ ಚಲಾಯಿಸುತ್ತಿದ್ದ ಯುವಕ ಆಯಾತಪ್ಪಿ ಸ್ಥಳದಲ್ಲೇ ಬಿದ್ದರೆ, ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಸುಮಾರು 100 ಮೀಟರ್ ಗಳ ವರೆಗೆ ಆ ಸ್ಕೂಟರ್ ನಲ್ಲಿ ಸಾಗಿ ಬಳಿಕ ಕೆಳಗಡೆ ಬಿದ್ದಳು.
ಈ ಘಟನೆಯಿಂದ ವಾಹನ ಸವಾರರಿಬ್ಬರಿಗೂ ಗಂಭೀರ ಗಾಯಗಳಾಯಿತು. ಕೂಡಲೇ ಸ್ಥಳದಲ್ಲಿದ್ದವರು ಅವರಿಗೆ ಉಪಚರಿಸಿ ಸಮೀಪದ ಆಸ್ಪತ್ರೆಗೆ ತೆರಳಲು ನೆರವಾದರು.
ಇದು ಸಾಧ್ಯನಾ…?
ಸವಾರನಿಲ್ಲದೆ ಸ್ಪೂಟರ್ ಹೇಗೆ ಚಲಿಸಲು ಸಾಧ್ಯ ಎಂದು ಮೈಸೂರಿನ ಹೆಸರಾಂತ ದ್ವಿಚಕ್ರ ವಾಹನ ಮ್ಯೆಕಾನಿಕ್ ರಮೇಶ್ ಅವರನ್ನು ಕೇಳಿದಾಗ, ವೇಗವಾಗಿ ಚಲಿಸುತ್ತಿರುವ ವಾಹನ ಬ್ಯಾಲೆನ್ಸ್ ತಪ್ಪುವ ತನಕ ಚಲಿಸುವ ಸಾಧ್ಯತೆ ಇದೆ. ಇಂಥ ಘಟನೆಗಳಲ್ಲೂ ಅಷ್ಟೆ, ಸವಾರನ ನಿಯಂತ್ರಣದಲ್ಲಿದ್ದ ವೇಗಕ್ಕೆ ಅನುಗುಣವಾಗಿ ಸವಾರನಿಲ್ಲದೆಯೂ ವಾಹನ ಚಲಿಸುತ್ತದೆ. ಕೆಲವೊಮ್ಮೆ ಸ್ಕೂಟರ್ ಓಡಿಸುವ ಎರಡು ಕೈ ಬಿಟ್ಟು ಕೇವಲ ದೇಹದ ಬ್ಯಾಲೆನ್ಸ್ ಮೂಲಕವೇ ಕೆಲ ದೂರ ಕ್ರಮಿಸುತ್ತಾರಲ್ಲ ಹಾಗೆ ಎಂದು ವಿವರಿಸಿದರು.
ENGLISH SUMMARY :
Even peacock can cause an accident.!
Indeed it was a freak accident! Can you imagine a peacock creating a road accident in a city like Mysuru? This incident has taken place near Dattagalli on the Ring Road. A youth was riding his scooter along with a woman on the Ring Road this morning. When they were near Oorukatheswari temple, suddenly a peacock with well-grown feathers flew across the scooter. The rider immediately lost the balance and fell on the spot. The scooter went ahead for about 100 mts with the pillion rider. Later she too fell. Both have sustained grievous injuries. The passersby admitted the two to a hospital nearby. Both are out of danger.
It is said that the injured belong to Danagalli near Koorgalli.