ಮೈಸೂರು,ಆ,24,2019(www.justkannada.in): ಈ ಬಾರಿ ಮೈಸೂರು ದಸರಾವನ್ನ ಅಚ್ಚುಕಟ್ಟಾಗಿ ಆಚರಣೆ ಮಾಡ್ತೀವಿ. ಈ ಜವಾಬ್ದಾರಿಯನ್ನು ಯಡಿಯೂರಪ್ಪ ನಮಗೆ ವಹಿಸಿದ್ದಾರೆ. ಇದರಲ್ಲಿ ಬಯಸಿದ್ದು, ಬಯಸದೆ ಇರೋದು ಅಂತಾ ಪ್ರಶ್ನೆ ಇಲ್ಲ. ದೊಡ್ಡವರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮೈಸೂರಿಗೆ ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾಧ್ಯಮಗಳ ಜತೆ ಮಾತನಾಡಿ, ಈ ಬಾರಿ ಸರಳ ದಸರೆಯು ಇಲ್ಲ, ಅದ್ದೂರಿ ದಸರೆಯು ಇಲ್ಲ. ತಾಯಿ ಚಾಮುಂಡೇಶ್ವರಿ ಹೇಗೆ ದಸರಾ ಮಾಡಿಸಿಕೊಳ್ಳುತ್ತಾರೆ ಹಾಗೆ ನಡೆಯುತ್ತೆ. ಆದರೆ ನಾವು ನಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಬೇಕಾಗಿದೆ. ಅದನ್ನ ಜನಪ್ರತಿನಿಧಿಗಳು, ಅಧಿಕಾರಿಗಳನ್ನ ಗಣನೆಗೆ ತೆಗೆದುಕೊಂಡು ಮಾಡ್ತೇವೆ ಎಂದರು.
ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಸಿಎಂ ಯಡಿಯೂರಪ್ಪ ಬುದ್ದಿವಂತರಿದ್ದಾರೆ ಅನುಭವಿಗಳಿದ್ದಾರೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಜೆ.ಎಚ್ ಪಟೇಲ್ ಕಾಲದಿಂದಲೂ ನಾನು ಸಚಿವನಾಗಿದ್ದೇನೆ. ಯಾವುದೇ ಖಾತೆ ನೀಡಿದರು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಖಾತೆ ಹಂಚಿಕೆ ವಿಚಾರ ಸಿಎಂ ಪರಮಾಧಿಕಾರ. ನಾನು ಸದ್ಯ ಮೈಸೂರು ಅಭಿವೃದ್ದಿ ಹಾಗೂ ದಸರಾ ಯಶಸ್ವಿ ಬಗ್ಗೆ ಗಮನಹರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
Key words: Mysore- dasara-Celebration- Minister V Somanna