ಚಿಕ್ಕಬಳ್ಳಾಪುರ,ಮಾರ್ಚ್,14,2023(www.justkannada.in): ಕಾಮಗಾರಿ ಪೂರ್ಣಗೊಳ್ಳದೇ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಸಂಗ್ರಹ ಆರಂಭಿಸಿದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವಿರುದ್ದ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೊಟ್ಟೆ ಉರಿ ಉಂಟಾಗಿದೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ಕಂಡು ಅವರ ಹೊಟ್ಟೆಕಿಚ್ಚು ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಗೆಯೇ ಜೆಡಿಎಸ್ ಕುರಿತು ವ್ಯಂಗ್ಯವಾಡಿದ ಸಚಿವ ಆರ್.ಅಶೋಕ್, ವಿಧಾನಸಭೆಯ ಚುನಾವಣೆಯಲ್ಲಿ ಮತ್ತೆ ಲಾಟರಿ ಹೊಡೆಯುತ್ತದೆ ಎಂದು ಜೆಡಿಎಸ್ ಪಕ್ಷದವರು ಕಾಯುತ್ತಿದ್ದಾರೆ. ಜೆಡಿಎಸ್ ಪಕ್ಷದವರ ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ. ಈ ಬಾರಿ ಹೋಮ ಹವನಕ್ಕೆ ಲಾಟರಿ ಹೊಡೆಯುವುದಿಲ್ಲ. ಅವರು ಗೆಲ್ಲುವುದು 20 ಅಂತೆ ಹೇಳಿಕೊಳ್ಳುವುದು 120 ಅಂತೆ ಎಂದು ಲೇವಡಿ ಮಾಡಿದರು.
Key words: development work – central – state –government- Congress- JDS –upset-Minister- R. Ashok,