ಮೈಸೂರು,ಏಪ್ರಿಲ್,4,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ಈ ನಡುವೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ.
ಎನ್. ಆರ್ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಹಿಂದೂಪರ ಮುಖಂಡ ಪಿ.ಗಿರಿಧರ್ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನನ್ನ ಕಡೆಗಣಿಸಲಾಗುತ್ತಿದೆ ಎಂದು ಸಂಸದರು,ಶಾಸಕರು ಸೇರಿದಂತೆ ಪಕ್ಷದ ಬಗ್ಗೆ ಬಿಜೆಪಿ ಮುಖಂಡ ಪಿ.ಗಿರಿಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
14 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಮಾರಣಾoತಿಕ ಹಲ್ಲೆಗೊಳಗಾಗಿ ಪಿ.ಗಿರಿಧರ್ ಅವರು ಬದುಕುಳಿದಿದ್ದರು. ಸದ್ಯ ಗಿರಿಧರ್ ಎನ್ ಆರ್ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಗಿರಿಧರ್ , ಹಲವಾರು ವರ್ಷಗಳಿಂದ ಪಕ್ಷದಿಂದ ಯಾವುದೇ ಅನುಕೂಲ ಸಿಗಲಿಲ್ಲ. ದಲಿತ ಸಮುದಾಯದ ಹಿಂದೂ ಕಾರ್ಯಕರ್ತನಿಗೆ ಅನ್ಯಾಯ ಮಾಡಲಾಗಿದೆ. ಒಬ್ಬ ದಲಿತ ಹಿಂದೂ ಕಾರ್ಯಕರ್ತನಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿಲ್ಲ. ಈ ಬಾರಿ ಎನ್ ಆರ್ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದೇನೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ಬಂಡಾಯ ಸ್ಪರ್ಧೆ ಮಾಡುತ್ತೇನೆ. ಹಿತೈಷಿಗಳು, ಸ್ನೇಹಿತರ ಕೇಳಿ ಮುಂದಿನ ತೀರ್ಮಾನ ಎಂದು ಹೇಳಿದ್ದಾರೆ.
Key words: Mysore- N.R constituency- rebel- BJP