ಮೈಸೂರು, ಏಪ್ರಿಲ್ 09, 2023 (www.justkannada.in): ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2022 ರ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.
ಬಂಡೀಪುರದಿಂದ ವಿಶೇಷ ಹೆಲಿಕಾಫ್ಟರ್ ಮೂಲಕ ಮೈಸೂರಿನ ಓವಲ್ ಮೈದಾನದ ಹೆಲಿಪ್ಯಾಡ್ ಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹುಲಿ ಗಣತಿ ವರದಿ ಬಿಡುಗಡೆ ಮಾಡಿದರು.
ವರದಿ ಪ್ರಕಾರ ರಾಷ್ಟ್ರದಲ್ಲಿ ಹುಲಿಗಳ ಸಂತತಿ ದ್ವಿಗುಣಗೊಂಡಿದೆ. 2022 ವರದಿ ಪ್ರಕಾರ ರಾಷ್ಟ್ರದಲ್ಲಿ ಒಟ್ಟು 3167 ಹುಲಿಗಳಿವೆ. 2006ರಲ್ಲಿ 1411, 2010ರಲ್ಲಿ 1706, 2014ರಲ್ಲಿ 2226, 2018ರಲ್ಲಿ 2967 ಇದೀಗ 2022ರ ವರದಿ ಪ್ರಕಾರ 3167 ಹುಲಿಗಳಿವೆ.
ಈ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಿದರು.