ದಾವಣಗೆರೆ,ಏಪ್ರಿಲ್,11,2023(www.justkannada.in): ಚುನಾವಣಾ ರಾಜಕಾರಣಕ್ಕೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ ನಿರ್ಧಾರಕ್ಕೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ಕೆ.ಎಸ್ ಈಶ್ವರಪ್ಪ ನಿರ್ಧಾರ ಕೇಳಿ ನನಗೆ ಶಾಕ್ ಆಯ್ತು. ಏನು ಮಾತನಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಈಶ್ವರಪ್ಪ ಬಿಜೆಪಿಗೆ ಹಿಂದುಳಿದ ವರ್ಗದ ಶಕ್ತಿತಂದಿದ್ರು. ಹಿಂದುಳಿದ ವರ್ಗಗಳ ಮತ ತಂದಿದ್ದಾರೆ. ಈಶ್ವರಪ್ಪ ತಮ್ಮ ನಿರ್ಧಾರವನ್ನ ವಾಪಸ್ ಪಡೆಯಬಬೇಕು. ಈಶ್ವರಪ್ಪ ಮತ್ತೆ ಶಾಸಕರಾಗಬೇಕು ಎಂಬುದು ನನ್ನ ಒತ್ತಾಯ ಎಂದರು.
ಇನ್ನು ಬಿಜೆಪಿ ಹೈಕಮಾಂಡ್ ನಿಂದ ಬಿಎಸ್ ಡಿಯೂರಪ್ಪಗೆ ಅವಮಾನವಾಗಿಲ್ಲ. ಈ ಕುರಿತು ಬಿಎಸ್ ವೈ ಅವರೇ ಸ್ಪಷ್ಟಪಡಿಸಿದ್ದಾರೆ. ದಕ್ಷಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರೆದಿದ್ದು ಬಿಎಸ್ ವೈ . ಹೀಗಾಗಿ ಬಿಎಸ್ ಯಡೊಯೂರಪ್ಪಗೆ ಅವಮಾನ ಆಗೋ ಸಾಧ್ಯತೆ ಇಲ್ಲ. ಇಡೀ 224 ಕ್ಷೇತ್ರಗಳಲ್ಲಿ ಬಿಎಸ್ ವೈಗೆ ವರ್ಚಸ್ಸು ಇದೆ ಎಂದರು.
Key words: KS Eshwarappa- decision- retirement –election- politics- MP Renukacharya