ಮೈಸೂರು,ಏಪ್ರಿಲ್,26,2023(www.justkannada.in): ಶಾಲಾಪೂರ್ವ ಹಂತದ ಮಕ್ಕಳ ಯಶಸ್ಸನ್ನು ಆಚರಿಸುವ ಸಲುವಾಗಿ ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭವನ್ನು ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ, ವಿಶೇಷ ಶಿಕ್ಷಣ ವಿಭಾಗ ಇಂದು ಆಯೋಜಿತ್ತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಕ್-ಭಾಷಾ ಪೆಥಾಲಾಜಿಸ್ಟ್ ಇಂದಿರಾ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ವೆಂಕಟೇಶ್ ರವರು ಉಸ್ತುವಾರಿ ನಿರ್ದೇಶಕರಾದ ಪ್ರೊಫೆಸರ್ ಪಿ ಮಂಜುಳರವರು ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮವು 86 ವಿಶೇಷ ಮಕ್ಕಳು ಮತ್ತು ಅವರ ಪೋಷಕರನ್ನು ವಿಶೇಷ ಶಿಕ್ಷಣ ವಿಭಾಗದ ಪ್ರೀಸ್ಕೂಲ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದನ್ನು ಸಂಭ್ರಮಿಸುವಲ್ಲಿ ಯಶಸ್ವಿಯಾಗಿದೆ. ಅವರಲ್ಲಿ 90%(78 ಮಕ್ಕಳು) ಮುಖ್ಯವಾಹಿನಿಗೆ ಬರುತ್ತಿದ್ದು ಉಳಿದವರು 10% (8 ಮಕ್ಕಳು) ಸಮನ್ವಯ ಶಿಕ್ಷಣ ಪಡೆಯಲು ಸಿದ್ಧರಾಗಿದ್ದಾರೆ. ಮುಖ್ಯ ಅತಿಥಿಗಳು ಈ ಸಾಧನೆ ತೋರಿದ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದಿಸಿದರು.
ಇವರ ಸಾಧನೆಗೆ ಪೋಷಕರು ಮತ್ತು ಶಿಕ್ಷಕ ವೃಂದದ ಮಹತ್ವದ ಪಾತ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಭಾರಿ ನಿರ್ದೇಶಕರಾದ ಡಾ.ಪಿ.ಮಂಜುಳಾ ಅವರು ಈ ತರಬೇತಿಯ ವಿಶೇಷತೆ ಮತ್ತು ಇನ್ನೂ ಮುಂದೆ ಪೋಷಕರು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದರ ಕುರಿತು ಪೋಷಕರಿಗೆ ಕಿವಿಮಾತು ಹೇಳಿದರು. ಸಂಸ್ಥೆಯು ಸದಾಕಾಲ ತನ್ನ ಸಹಕಾರ ನೀಡಲಿದೆ ಎಂದು ಅಭಯ ಇತ್ತರು. ಕಾರ್ಯಕ್ರಮವು ಪದವಿಪ್ರಧಾನ ಮತ್ತು ಪ್ರಗತಿ ಪತ್ರ ನೀಡುವ ಮೂಲಕ ಕೊನೆಗೊಂಡಿತು.
key words: Pre-School-Graduation-Ceremony –AIISH-Mysore