ಬೀದರ್,ಏಪ್ರಿಲ್,29,2023(www.justkannada.in): ಕಾಂಗ್ರೆಸ್ ನಿರ್ಮಿಸಿದ್ದ ಮೀಸಲಾತಿಯನ್ನ ಬದಲಾಯಿಸಿದ್ದೇವೆ. ಶೋಷಿತರಿಗೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೀದರ್ ನ ಹುಮ್ನಾಬಾದ್ ಚಿನಕೇರಾ ಕ್ರಾಸ್ ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ನಾಯಕರು ಸನ್ಮಾನಿಸಿದರು. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಸವಣ್ಣನವರನಾಡಿಗೆ ಆಧುನಿಕ ವಿಶ್ವನಾಯಕನಿಗೆ ಸ್ವಾಗತ. ಅನುಭವ ಮಂಟಪದ ಮಹತ್ವ ಗುರುತಿಸಿದ್ದೆ ಪ್ರಧಾನಿ ಮೋದಿ. ಕಾಂಗ್ರೆಸ್ ನಿರ್ಮಿಸಿದ್ದ ಮೀಸಲಾತಿಯನ್ನ ಬದಲಾಯಿಸಿದ್ದೇವೆ. ಶೋಷಿತರಿಗೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ ಎಂದರು.
ಸಮಾನತೆ ಪ್ರಜಾಪ್ರಭುತ್ವದ ಮೊದಲ ಕರ್ತವ್ಯ. ನಮ್ಮ ಸರ್ಕಾರ ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದೆ. ಕೋವಿಡ್ ವೇಳೆ ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದೇವೆ. ಕಳೆದ 70 ವರ್ಷದಲ್ಲಿ 22 ಲಕ್ಷ ಮನೆ ನಿರ್ಮಿಸಲಾಗಿತ್ತು. ಆದರೆ ಈಗ 7 ವರ್ಷದಲ್ಲಿ 40 ಲಕ್ಷ ಮನೆ ನಿರ್ಮಿಸಿದ್ದು ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ಲಿಂಗಾಯತ ಸಿಎಂ ಭ್ರಷ್ಟರು ಅಂತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ಧರಾಮಯ್ಯಗೆ ನಾಚಿಕೆ ಆಗಬೇಕು. ಭ್ರಷ್ಟ ಸರ್ಕಾರ ಅಂದ್ರೆ ಕಾಂಗ್ರೆಸ್ ಎಂದು ಗುಡುಗಿದರು.
ಮಲ್ಲಿಕಾರ್ಜುನ ಖರ್ಗೆ ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನರೇಂದ್ರ ಮೋದಿ ಅಂದ್ರೆ ಕಾಂಗ್ರೆಸ್ ಗೆ ಸೋಲು. ಬೀದರ್ ನ ಎಲ್ಲಾ ಕ್ಷೇತ್ರಗಳಲ್ಲೂ ಕಮಲ ಅರಳಿಸಬೇಕು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.
Key words: We – reservation – social justice – CM Bommai-bidar