ಮೈಸೂರು,ಮೇ,11,2019(www.justkannada.in): ಬಸವೇಶ್ವರ ಕುರಿತು ಎಲ್ಲಾ ಕೇತ್ರದಲ್ಲಿಯೂ ಚರ್ಚೆಯಾಗ್ತಿದೆ. 8-9ನೇ ಶತಮಾನಗಳ ನಂತರವು ಅವರ ವಿಚಾರಗಳು ಚಾಲನೆಯಲ್ಲಿದೆ. ಅವರ ಯೋಚನೆಗಳು ಸಾರ್ವಕಾಲಿಕ ವಿಚಾರಗಳಾಗಿದೆ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ನುಡಿದರು.
ಮೈಸೂರಿನಲ್ಲಿ ಶ್ರೀ ಬಸವೇಶ್ವರ ಸಾಮಾಜಿಕ, ಪರಿಷ್ಕರಣ ಸಂಶೋದನ, ಹಾಗೂ ವಿಸ್ತರಣ ಕೇಂದ್ರ ಉದ್ಘಾಟನೆ ಮಾಡಲಾಯಿತು. ಸುತ್ತೂರು ಶ್ರೀಗಳು ಬಸವೇಶ್ವರ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿ ಕುಲಪತಿ ಹೇಮಂತ್ ಕುಮಾರು ಉಪಸ್ಥಿತರಿದ್ದರು.
ಬಸವೇಶ್ವರ ಕೇಂದ್ರ ಉದ್ಘಾಟನೆಯ ನಂತರ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರು..ಬಸವೇಶ್ವರ ಅವರ ಯೋಚನೆಗಳು ಸಾರ್ವಕಾಲಿಕ ವಿಚಾರಗಳಾಗಿದ್ದು ಅವರ ನೈತಿಕ ಜೀವ ಮನ ಹಾಗೂ ಸಾತ್ವಿಕ ಜೀವನವನ್ನ ತಿಳಿಸಿದವರು. ಅವರ ಹೆಸರಿನಲ್ಲಿ ಅನೇಕ ಸಂಸ್ಥೆಗಳಿವೆ. ಮೈಸೂರಿನಲ್ಲಿ ಸಮಾರು 22ಕ್ಕೂ ಹೆಚ್ವು ಪೀಠಗಳು ಸ್ಥಾಪನೆಯಾಗಿದೆ. ಅವರ ಅದರ್ಶಗಳ ಮೇಲೆ ಯುವಕರು ಹೆಚ್ಚಿನ ಆಕರ್ಷಿತರಾಗಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ತಿಳಿಸಿದರು.
ಬಸವಣ್ಣನವರ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾದವರು ಅಲ್ಲಮಪ್ರಭು. ಅವರು ಹೇಗೆ ಪ್ರಭಾವ ಬೀರಿದರೋ ಅದೇ ರೀತಿ ಮೈಸೂರು ವಿವಿಯೂ ಕೂಡ ಹಾಗಲಿ. ಕುಲಪತಿ ಹಾಗೂ ಕುಲಸಚಿವರು ಇಬ್ಬರು ರಾಗಾ ಹಾಗೂ ಶೃತಿ ಇದ್ದಂತೆ. ಇಬ್ಬರು ಆಲೋಚನೆಗಳು ಒಂದೇ ಇದೆ. ಇಬ್ಬರು ಸೇರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಬಸವಣ್ಣನವರ ಮಾತಿನಂತೆ ವಿವಿ ಜ್ಞಾನ ನಿಧಿಯಾಗಲಿ ಎಂದು ಸುತ್ತೂರು ಶ್ರೀಗಳು ತಿಳಿಸಿದರು.
Key words: Sri Basaveshwara –Social- Revision- Research Center –inaugurated- Mysore