ಬೆಂಗಳೂರು,ಮೇ,8,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಒಂದು ದಿನವಷ್ಟೇ ಬಾಕಿ ಇದ್ದು ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ಮೇ 10 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಯಾವುದೇ ಸಭೆ ಸಮಾರಂಭ ಉತ್ಸವ ರ್ಯಾಲಿಗಳನ್ನ ನಡೆಸುವಂತಿಲ್ಲ. ಅಭ್ಯರ್ಥಿಗಳು ಸೇರಿ 6 ಜನರು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಅಭ್ಯರ್ಥಿ ಹೊರತುಪಡಿಸಿ ಬೇರೆ ಕ್ಷೇತ್ರದ ವ್ಯಕ್ತಿಗಳು ಇರುವಂತಿಲ್ಲ. ಕ್ಷೇತ್ರದ ಹೊರಗಿನವರು ಬಂದು ಪ್ರಚಾರ ಮಾಡುವಂತಿಲ್ಲ. ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನ ನಿಷೇಧೀಸಲಾಗಿದೆ. ಮೇ 10ರವರೆಗೆ ಮತದಾನ ಮುಗಿಯುವವರೆ ಮದ್ಯ ಮಾರಾಟವನ್ನ ನಿಷೇಧ ಮಾಡಲಾಗಿದೆ. ಈ ನಡುವೆ ಮೇ 10 ರಂದು ರಾಜ್ಯದಲ್ಲಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಜ್ಜಾಗಿದ್ದಾರೆ.
Key words: State- Assembly -Elections: – open campaigning-bandh