ಬೆಳಗಾವಿ,ಮೇ,9,2023(www.justkannada.in): ಬೆಳಗಾವಿಯಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 15 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ.
ಚಿಕ್ಕೋಡಿ ತಾಲೂಕಿನ ಮಾಂಜರಿ ಚೆಕ್ಪೋಸ್ಟ್ ಬಳಿ ಹಣವನ್ನ ಪೊಲೀಸರು ಹಣವನ್ನ ಸೀಜ್ ಮಾಡಿದ್ದಾರೆ. ಮಹಾರಾಷ್ಟ್ರದ ಗಡಹಿಂಗ್ಲಜ್ನಿಂದ ಮಾಂಜರಿಗೆ ಬರುತ್ತಿದ್ದ ಕಾರು ತಪಾಸಣೆ ವೇಳೆ ಚೀಲದಲ್ಲಿ 15 ಲಕ್ಷ ರೂ ಹಣ ಪತ್ತೆಯಾಗಿದ್ದು, ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆದಾತ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: 15 lakhs – money-without- documents- Siege