ತುಮಕೂರು,ಮೇ,11,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉತ್ತಮ ಆಡಳಿತ ಕೊಡುವವರನ್ನ ಹೈಕಮಾಂಡ್ ಸಿಎಂ ಆಗಿ ಆಯ್ಕೆ ಮಾಡುತ್ತದೆ. ಹೈಕಮಾಂಡ್ ನನ್ನ ಸಿಎಂ ಮಾಡಿದ್ರೆ ಬೇಡ ಅನ್ನೋಕೆ ಆಗುತ್ತಾ…? ಎಂದು ಮಾಧ್ಯಮದವರ ಪ್ರಶ್ನೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಉತ್ತರಿಸಿದರು.
ತುಮಕೂರಿನಲ್ಲಿ ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್, ಸರ್ಕಾರ ರಚನೆ ಮಾಡಲು ಮಾನಸಿಕವಾಗಿ ಸಿದ್ದರಾಗದ್ದೇವೆ. 2013ರಲ್ಲಿ 120 ಸ್ಥಾನ ಬರುವ ಮುನ್ಸೂಚನೆ ಕೊಟ್ಟಿದ್ದೆ. ಆದರೆ ನಾವು 122 ಸ್ಥಾನ ಗೆದ್ದವು. ಈಗ ನಾನು 130 ಸ್ಥಾನ ಗೆಲ್ಲುತ್ತೇವೆ ಎಂದಿದ್ದೇನೆ ನನ್ನ ಲೆಕ್ಕಾಚಾರ ಸರಿ ಆಗಬಹುದು. ಎಲ್ಲಾ ಕಾಲಕ್ಕೂ ಸಮೀಕ್ಷೆಗಳು ನಿಜವಾಗುವುದಿಲ್ಲ. ಕೆಲವೊಮ್ಮೆ ಸರ್ವೇ ನಿಜವಾಗಿದೆ. ಕೆಲವೊಮ್ಮೆ ಸುಳ್ಳಾಗಿದೆ. ಆದ್ರೂ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಪರ ಅಲೆ ಇರೋದು ಗೊತ್ತಾಗಿದೆ . ವರುಣಾದಲ್ಲಿ ಯಾವುದೇ ತೊಂದರೆ ಇಲ್ಲದೇ ಸಿದ್ಧರಾಮಯ್ಯ ಗೆಲ್ತಾರೆ. ಕೊರಟಗೆರೆ ಕ್ಷೇತ್ರದಲ್ಲಿ ನಾನು ಹೆಚ್ಚು ಮತಪಡೆದು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಕಾಂಗ್ರೆಸ್ 6ರಿಂದ 7 ಸ್ಥಾನವನ್ನ ಗೆಲ್ಲುತ್ತದೆ. ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಿಎಲ್ ಪಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಬಗ್ಗೆ ತೀರ್ಮಾನ ಮಾಡುತ್ತೇವೆ. ಉತ್ತಮ ಆಡಳಿತ ಕೊಡುವವರನ್ನ ಸಿಎಂ ಮಾಡುತ್ತಾರೆ ಎಂದರು.
Key words: assembly election-high command –CM- Former DCM -Dr. G. Parameshwar.