ಹಾಸನ,ಮೇ,11,2023(www.justkannada.in): ಹಾಸನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಜನ ಮತ ಚಲಾಯಿಸಿದ್ದಾರೆ. ಪಾಳೆಗಾರಿಕೆ ಮಾಡುವವರ ವಿರುದ್ಧ ಜನ ಮತ ಹಾಕಿದ್ದಾರೆ ಎಂದು ಜೆಡಿಎಸ್ ವಿರುದ್ಧ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಟಾಂಗ್ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರೀತಂಗೌಡ, ಹಾಸನದ ಜನತೆ ಕಳೆದ ಬಾರಿ ಓರ್ವ ಯುವಕ ಎಂದು ಜನರು ನನ್ನನ್ನು ಗೆಲ್ಲಿಸಿದ್ದರು. ಈ ಬಾರಿ ಒಳ್ಳೆಯ ಅಭಿವೃದ್ಧಿ ಮಾಡುತ್ತಾನೆ ಎಂದು ಮತ ಕೊಟ್ಟಿದ್ದಾರೆ. ಪಾಳೆಗಾರಿಕೆ ಮಾಡುವವರ ವಿರುದ್ಧ ಕ್ಷೇತ್ರದ ಜನ ಮತ ನೀಡಿದ್ದಾರೆ. ಹಾಸನದಲ್ಲಿ ಎಲ್ಲಾ ವರ್ಗದ ಜನರು ನನಗೆ ಬೆಂಬಲ ನೀಡಿದ್ದಾರೆ. ಅಚ್ಚರಿಪಡುವ ರೀತಿ ಹಾಸನ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ಸಕಲೇಶಪುರ, ಬೇಲೂರು ಕ್ಷೇತ್ರದ ಬಿಜೆಪಿ ಗೆಲ್ಲಲಿದೆ. 2018ರ ಸರ್ವೆಯಲ್ಲೂ ಕಾಂಗ್ರೆಸ್ ಮುನ್ನಡೆ ಎಂದೇ ಹೇಳಲಾಗಿತ್ತು. ಆಗಲೂ ಸರ್ವೆ ಸತ್ಯ ಆಗಿಲ್ಲ, ಈಗಲೂ ಸರ್ವೆಗಳು ಸತ್ಯ ಆಗಲ್ಲ. ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಪ್ರೀತಂಗೌಡ ವಿಶ್ವಾಸ ವ್ಯಕ್ತಪಡಿಸಿದರು.
Key words: Hassan-bjp-candidate-Preetham gowda-tong-jds