ಬೆಂಗಳೂರು,ಮೇ,17,2023(www.justkannada,in): ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ಜೋರಾಗಿದ್ದು ಸಿಎಂ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸ್ಥಾನ ಇಬ್ಬರ ನಡುವೆ ಹಂಚಿಕೆಯಾಗುತ್ತದೆ, ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್ 3 ವರ್ಷ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು. ಈ ವಿಚಾರ ಕುರಿತು ಶಾಸಕ ಹೆಚ್.ಸಿ ಮಹದೇವಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ಸಿ ಮಹದೇವಪ್ಪ, ಅಧಿಕಾರ ಹಂಚಿಕೆ ಕೇವಲ ಅಂತೆ ಕಂತೆ: 5 ವರ್ಷಗಳ ಕಾಲ ಒಬ್ಬರೇ ಸಿಎಂ ಆಗಬೇಕು. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದೇ ಅಂತಿಮ ಎಂದಿದ್ದಾರೆ.
ನಾನು ಸಚಿವನಾಗಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಯಾವುದೇ ಖಾತೆಯನ್ನ ಕೇಳಿಲ್ಲ ಈ ಹಿಂದೆ ಲೋಕೋಪಯೋಗಿ ಸಚಿವನಾಗಿ ಕೆಲಸ ಮಾಡಿದ್ದೆ ಎಂದು ಹೇಳಿದ್ದಾರೆ.
ಡಿಸಿಎಂ ಹುದ್ದೆ ಸಾಂವಿಧಾನಕ ಅಲ್ಲ. ಅವರಿಗೊಂದು ಇವರಿಗೊಂದು ಅಂತ ಕೊಟ್ಟು ಡಿಸಿಎಂ ಸ್ಥಾನದ ಮಹತ್ವ ಹಾಳಾಗಬಾರದು. ಡಿಸಿಎಂ ಹುದ್ದೆಗೆ ಅಂತ ಮಹತ್ವವೇನೂ ಇಲ್ಲ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
Key words: power -CM -5 years-MLA- HC Mahadevappa.