ಪಿಎಫ್ ಐ, ಆರ್ ಎಸ್ ಎಸ್ ಯಾವುದೇ ಸಂಘಟನೆ ಆಗಿರಲಿ ನಿಷೇಧಕ್ಕೆ ಹಿಂದೇಟು ಹಾಕಲ್ಲ- ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಮೇ,25,2023(www.justkannada.in): ಭಜರಂಗದಳ, ಪಿಎಫ್ ಐ, ಆರ್ ಎಸ್ ಎಸ್ ಯಾವುದೇ ಸಂಘಟನೆ ಆಗಿರಲಿ. ಕೋಮು ವಿಷ ಬೀಜ ಬಿತ್ತಿದ್ರೆ ಆ ಸಂಘಟನೆಗಳ ನಿಷೇಧಕ್ಕೆ ಹಿಂದೇಟು ಹಾಕಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಸಂಘಟನೆ ಆಗಿರಲಿ. ಕಾನೂನು ಬಾಹಿರ ಚಟುವಟಿಕೆ ನಡೆಸಿದರೇ ಕ್ರಮ ಕೈಗೊಳ್ಳುತ್ತೇವೆ.  ಬಜರಂಗದಳ ಆಗಿರಲಿ, ಆರ್ ಎಸ್ ಎಸ್ ಮತ್ತು  ಪಿಎಫ್ ಐ ಆಗಿರಬಹುದು, ಅಂತಾ ಸಂಘಟನೆ ನಿಷೇಧಕ್ಕೆ ಹಿಂದೆಟು ಹಾಕಲ್ಲ.  ಕೋಮು ವಿಷ ಬೀಜ ಬಿತ್ತಿದ್ರೆ ಬ್ಯಾನ್ ಮಾಡುತ್ತೇವೆ.  ರಾಜ್ಯದ ನೆಮ್ಮದಿ ಕೆಡಿಸುವ ಯಾವುದೇ ಸಂಘಟನೆ ಇರಲಿ. ಕಾನೂನಿನ ಚೌಕಟ್ಟಿನಲ್ಲಿ ಕಟ್ಟಿ ಹಾಕುತ್ತೇವೆ ಎಂದರು.

ಸಂಪುಟ ವಿಸ್ತರಣೆ, ಖಾತೆ ಹಂಚಿಕೆಗೆ ಸಂಧಾನ ಸೂತ್ರ ಎಂಬುದಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬಗ್ಗೆ ಚಿಂತಿಸುತ್ತಿದ್ದೇವೆ. ಕೆಲವೊಂದು ಸಿಕ್ಕುಗಳಿವೆ, ಸಿಕ್ಕು ಗಂಟು ಬಿಡಿಸುವ ಕೆಲಸವಾಗುತ್ತಿದೆ. ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಒಂದಷ್ಟು ಸಿಕ್ಕು. ಒಂದಷ್ಟು ದಂಡು, ಸಿಕ್ಕುಗಳಾಗುವುದು ಸಹಜ. ಎಲ್ಲವನ್ನೂ ಚಿಂತಿಸಿಯೇ ಸುಸೂತ್ರವಾಗಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Key words: PFI- RSS-  organization- ban – Minister- Priyank Kharge.