ಬೆಂಗಳೂರು,ಮೇ,27,2023(www.justkannada.in): ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಇಂದು 24 ಮಂದಿ ಸಚಿವರಾಗಿ ಸೇರ್ಪಡೆಯಾಗುತ್ತಿದ್ದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ.
ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು ನೂತನ ಸಚಿವರಾಗಿ ಹೆಚ್.ಕೆ ಪಾಟೀಲ್, ಕೃಷ್ಣಭೈರೇಗೌಡ, ಪಿರಿಯಾಪಟ್ಟಣ ಶಾಸಕರಾದ ಕೆ.ವೆಂಕಟೇಶ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಸಿಎಂ ಸಿದ‍್ಧರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದರು.
Key words: Congress-minister-HK patil-Krishnabyregowda-oath