ಬೆಂಗಳೂರು,ಮೇ,27,2023(www.justkannada.in): ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗಾಗಿ ಸಂಪೂರ್ಣ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇಂದು ನೂತನ ಸಚಿವರಾಗಿ 24 ಮಂದಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್ ಅವರ ಸಮ್ಮುಖದಲ್ಲಿ 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು ಯಾರು ಯಾರಿಗೆ ಯಾವ ಯಾವ ಜವಾಬ್ದಾರಿ ನೀಡಲಾಗಿದೆ ಇಲ್ಲದೆ ನೋಡಿ ಮಾಹಿತಿ…ಸಿಎಂ ಸಿದ್ದರಾಮಯ್ಯ -ಹಣಕಾಸು, DPAR ಮತ್ತು ಗುಪ್ತಚರ ಇಲಾಖೆ
ಡಿಸಿಎಂ ಡಿ.ಕೆ.ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ
ಡಾ.ಜಿ.ಪರಮೇಶ್ವರ್ -ಗೃಹ ಸಚಿವ
ಹೆಚ್.ಕೆ.ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ
ಕೆಚ್.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ
ಕೆ.ಜೆ.ಜಾರ್ಜ್ -ಇಂಧನ ಖಾತೆ
ಎಂ.ಬಿ.ಪಾಟೀಲ್ -ಐಟಿ, ಬಿಟಿ ಇಲಾಖೆ
ರಾಮಲಿಂಗಾ ರೆಡ್ಡಿ –ಸಾರಿಗೆ ಇಲಾಖೆ
ಸತೀಶ್ ಜಾರಕಿಹೊಳಿ –ಲೋಕಪಯೋಗಿ ಇಲಾಖೆ
ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಜಮೀರ್ ಅಹ್ಮದ್ ಖಾನ್-ವಸತಿ, ವಕ್ಫ್ ಅಂಡ್ ಅಲ್ಪಸಂಖ್ಯಾತ ಇಲಾಖೆ
ಕೃಷ್ಣ ಬೈರೇಗೌಡ –ಕಂದಾಯ ಇಲಾಖೆ
ದಿನೇಶ್ ಗಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚಲುವರಾಯಸ್ವಾಮಿ –ಕೃಷಿ ಇಲಾಖೆ
ಕೆ.ವೆಂಕಟೇಶ್ -ಪಶುಸಂಗೋಪನೆ
ಹೆಚ್.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ
ಈಶ್ವರ್ ಖಂಡ್ರೆ-ಅರಣ್ಯ ಮತ್ತು ಪರಿಸರ ಖಾತೆ
ಕೆ.ಎನ್.ರಾಜಣ್ಣ-ಸಹಕಾರ ಖಾತೆ
ಶರಣಪ್ಪ ಬಸಪ್ಪ ದರ್ಶಾನಾಪುರ್ -ಸಣ್ಣ ಕೈಗಾರಿಕೆ ಖಾತೆ
ಶಿವನಾಂದ್ ಪಾಟೀಲ್ -ಜವಳಿ ಮತ್ತು ಸಕ್ಕರೆ ಖಾತೆ
ಆರ್ಬಿ ತಿಮ್ಮಾಪುರ್ -ಅಬಕಾರಿ ಮತ್ತು ಮುಜರಾಯಿ ಇಲಾಖೆ
ಎಸ್.ಎಸ್.ಮಲ್ಲಿಕಾರ್ಜುನ್ -ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಗಡಗಿ -ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
ಶರಣ್ ಪ್ರಕಾಶ್ ಪಾಟೀಲ್ -ಉನ್ನತ ಶಿಕ್ಷಣ ಇಲಾಖೆ
ಮಂಕಾಳ್ ವೈದ್ಯ-ಮೀನುಗಾರಿಕೆ ಮತ್ತು ಬಂದರು ಇಲಾಖೆ
ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ರಹೀಂ ಖಾನ್ –ಪೌರಾಡಳಿತ ಖಾತೆ
ಡಿ.ಸುಧಾಕರ್ –ಮೂಲಸೌಕರ್ಯ ಖಾತೆ
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಖಾತೆ
ಎನ್.ಎಸ್.ಬೊಸೆರಾಜು -ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ ಖಾತೆ
ಭೈರತಿ ಸುರೇಶ್- ನಗರಾಭಿವೃದ್ಧಿ ಇಲಾಖೆ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
ಎಂ.ಸಿ.ಸುಧಾಕರ್-ವೈದ್ಯಕೀಯ ಖಾತೆ
ಬಿ.ನಾಗೇಂದ್ರ -ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ.
Key words: Allocation – new ministers-CM-Siddaramaiah