ಬೆಂಗಳೂರು,ಆ,28,2019(www.justkannada.in) : ಬಿಜೆಪಿ ಸರ್ಕಾರದಲ್ಲೂ ಫೋನ್ ಕದ್ದಾಲಿಕೆ ಆಗ್ತಿದೆ. ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಗಂಭೀರ ಆರೋಪ ಮಾಡಿದರು.
ವಿಧಾನಸೌಧದಲ್ಲಿ ಜೆಡಿಎಸ್ ವಕ್ತಾರ ರಮೇಶ್ ಬಾಬು ಹಾಗೂ ಕೋನರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳ ಫೋನ್ ಕದ್ಧಾಲಿಕೆ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಬಾಬು, ಬಿಜೆಪಿ ಸರ್ಕಾರದಲ್ಲೂ ಟೆಲಿಫೋನ್ ಕದ್ದಾಲಿಕೆ ಆಗ್ತಿದೆ, ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ. ಇಂಟೆಲಿಜೆನ್ಸ್ ಡಿಪಾರ್ಟ್ ಮೆಂಟ್ ನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನನಗೂ ಕೂಡ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿಬಕರೆ ಮಾಡಿದ್ರು. ಸಿದ್ದರಾಮಯ್ಯನವರ ಮೇಲೆ ದೇವೇಗೌಡರ ಅಭಿಪ್ರಾಯ ಏನು ಅಂತ ಒತ್ತಾಯ ಮಾಡಿ ಕೇಳಿದ್ರು. ಅದಕ್ಕೆ ನಾನು ಅವ್ರನ್ನೇ ಕೇಳಿ ಅಂತ ಹೇಳಿದ್ದೆ. ಡೌಟ್ ಬಂದು ನಂಬರ್ ಯಾರದ್ದು ಅಂತ ಚೆಕ್ ಮಾಡ್ದಾಗ ಅದು ಇಂಟೆಲಿಜೆನ್ಸ್ ನವರದ್ದು. ಪತ್ರಕರ್ತರ ಹೆಸರಿನಲ್ಲಿ ಇವರು ಯಾಕೆ ಫೋನ್ ಮಾಡ್ವೇಕು. ಪ್ರತಿಪಕ್ಷದವರನ್ನ ಮಣಿಸಲು ಇಂಟೆಲಿಜೆನ್ಸ್ ನವರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಬಾಬು ಕಿಡಿಕಾರಿದರು. ಅಲ್ಲದೆ ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಿಸಿದ್ದೇನೆ. ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ ಎಂದರು.
ಫೋನ್ ಕದ್ದಾಲಿಕೆ ಸಿಬಿಐಗೆ ಕೊಟ್ಟಿರೋದೇ ತಪ್ಪು. ಹಲವಾರು ಪ್ರಕರಣಗಳಲ್ಲಿ ಸಿಬಿಐ ಪ್ರತಿವಾದಿಯಾಗಿದೆ. ಹೀಗಿರುವಾಗ ತನಿಖೆ ನಡೆಸಕು ಸಿಬಿಐಗೆ ಕೊಡೋಕೆ ಹೇಗ ಸಾಧ್ಯ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಮಾನದಂಡ ರಚನೆ ಮಾಡ್ವೇಕು ಅಂತ ಹಿಂದೆಯೇ ನಿರ್ದೇಶನ ನೀಡಿದೆ. ಆದ್ರೆ ಯಾವುದೇ ಸರ್ಕಾರ ಸಮಿತಿ ರಚನೆ ಮಾಡಿ ಗೈಡ್ ಲೈನ್ ಮಾಡಿಲ್ಲ. ಸಂತೋಷ್ ಹೆಗ್ಡೆಯವರ ಫೋನ್ ಕೂಡ ಟ್ಯಾಪಿಂಗ್ ಆಗಿತ್ತು. ಆಗ ಸಿಎಂ ಯಡಿಯೂರಪ್ಪ ವಿರುದ್ದವೇ ನೇರವಾಗಿ ಆರೋಪ ಮಾಡಿದ್ರು. ಈ ಪ್ರಕರಣ ಸಿಬಿಐಗೆ ಕೊಡೋದು ಬೇಡ. ಈ ಬಗ್ಗ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದೇನೆ. ಟೆಲಿಫೋನ್ ಟ್ಯಾಪಿಂಗ್ ಪ್ರಕರಣವನ್ನ ಎಸ್ ಐಟಿ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು.
Key words: Phone tapping-BJP government- JDS spokesperson- Ramesh Babu -serious accused.