ಮೈಸೂರು ,ಜೂನ್,10,2023(www.justkannada.in): ಜೀರೋ ಟ್ರಾಫಿಕ್ ಮಾಡಿದ್ಧಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರ ವಿರುದ್ಧ ಸಿಎಂ ಸಿದ್ಧರಾಮಯ್ಯ ಗರಂ ಆದ ಘಟನೆ ನಡೆಯಿತು.
ಸಿದ್ಧರಾಮಯ್ಯ ಸಿಎಂ ಆದ ನಂತರ ಜೀರೋ ಟ್ರಾಫಿಕ್ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಇಂದು ಮೈಸೂರು ಪ್ರವಾಸದಲ್ಲಿದ್ದ ವೇಳೆ ಪೊಲೀಸರು ಜೀರೋ ಟ್ರಾಫಿಕ್ ಮಾಡಿದ್ಧರು. ಮೈಸೂರು ಏರ್ ಪೋರ್ಟ್ ನಿಂದ ಜಿಲ್ಲಾ ಪಂಚಾಯತ್ ಅವರಣಕ್ಕೆ ಸಿಎಂ ಸಿದ್ಧರಾಮಯ್ಯ ಬಂದಿದ್ದ ವೇಳೆ ಜೀರೋ ಟ್ರಾಫಿಕ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ವಿರುದ್ದ ಗರಂ ಆದ ಸಿದ್ಧರಾಮಯ್ಯ, ನಿಮಗೆ ಗೊತ್ತಿದೆಯಾ ಜೀರೋ ಟ್ರಾಫಿಕ್ ಬೇಡ ಎಂದಿದ್ದೆ ಆದರೂ ಏಕೆ ಜೀರೋ ಟ್ರಾಫಿಕ್ ಮಾಡಿದ್ದೀರಾ..? ಎಂದು ಪ್ರಶ್ನಿಸಿದರು.
ಈ ಬಗ್ಗೆ ಪೊಲೀಸ್ ಆಯುಕ್ತ ಮಾತನಾಡದೇ ಸುಮ್ಮಿದ್ದರು. ನಂತರ ಡೋಂಟ್ ಡು ದಟ್ ಎಂದು ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು.
Key words: CM Siddaramaiah–Mysore- Police -Commissioner – zero traffic.