ನವದೆಹಲಿ,ಜೂನ್,12,2023(www.justkannada.in): ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ : 4,314 ಕೋಟಿ ರೂ. ಹಂಚಿಕೆ ಮಾಡಿದೆ.
ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್ಟಿ ಪಾಲು ಹಂಚಿಕೆ ಮಾಡಿದೆ. ಒಟ್ಟು 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.
ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ. ಪೈಕಿ ಕರ್ನಾಟಕಕ್ಕೆ 4,314 ರೂ, ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ ನೀಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಇನ್ನು ಉತ್ತರಪ್ರದೇಶಕ್ಕೆ 21,218 ಕೋಟಿ ರೂ ಜಿಎಸ್ ಟಿ ಪಾಲು ಸಿಕ್ಕಿದೆ.
ವಿವಿಧ ರಾಜ್ಯಗಳಿಗೆ ಬಿಡುಗಡೆಯಾಗಿರುವ ಜಿಎಸ್ ಟಿ ಪಾಲು ಹೀಗಿದೆ ನೋಡಿ..
ಉತ್ತರಪ್ರದೇಶ: 21,218 ಕೋಟಿ ರೂ.
ಬಿಹಾರ: 11,897 ಕೋಟಿ ರೂ.
ಮಧ್ಯಪ್ರದೇಶ: 9,285 ಕೋಟಿ ರೂ.
ಪಶ್ಚಿಮ ಬಂಗಾಳ: 8,898 ಕೋಟಿ ರೂ.
ಮಹಾರಾಷ್ಟ್ರ: 7,472 ಕೋಟಿ ರೂ.
ರಾಜಸ್ಥಾನ್: 7,128 ಕೋಟಿ ರೂ.
ಒಡಿಶಾ: 5,356 ಕೋಟಿ ರೂ.
ತಮಿಳುನಾಡು: 4,825 ಕೋಟಿ ರೂ.
ಆಂಧ್ರಪ್ರದೇಶ: 4,787 ಕೋಟಿ ರೂ.
ಕರ್ನಾಟಕ: 4,314 ಕೋಟಿ ರೂ.
ಗುಜರಾತ್: 4,114 ಕೋಟಿ ರೂ.
ಛತ್ತೀಸ್ಗಡ: 4,030 ಕೋಟಿ ರೂ.
ಜಾರ್ಖಂಡ್: 3,912ಕೋಟಿ ರೂ.
ಅಸ್ಸಾಮ್: 3,700 ಕೋಟಿ ರೂ.
ತೆಲಂಗಾಣ: 2,486 ಕೋಟಿ ರೂ.
ಕೇರಳ: 2,277 ಕೋಟಿ ರೂ.
ಪಂಜಾಬ್: 2,137 ಕೋಟಿ ರೂ.
ಅರುಣಾಚಲಪ್ರದೇಶ: 2,078 ಕೋಟಿ ರೂ.
ಉತ್ತರಾಖಂಡ್: 1,322 ಕೋಟಿ ರೂ.
ಹರ್ಯಾಣ: 1,293 ಕೋಟಿ ರೂ.
ಹಿಮಾಚಲಪ್ರದೇಶ: 982 ಕೋಟಿ ರೂ.
ಮೇಘಾಲಯ: 907 ಕೋಟಿ ರೂ.
ಮಣಿಪುರ: 847 ಕೋಟಿ ರೂ.
ತ್ರಿಪುರಾ: 837 ಕೋಟಿ ರೂ.
ನಾಗಾಲ್ಯಾಂಡ್: 673 ಕೋಟಿ ರೂ.
ಮಿಝೋರಾಂ: 591 ಕೋಟಿ ರೂ.
ಸಿಕ್ಕಿಂ: 459 ಕೋಟಿ ರೂ.
ಗೋವಾ: 457 ಕೋಟಿ ರೂ.
Key words: central government -released – GST -share – states.