ಜಮ್ಮು-ಕಾಶ್ಮೀರ, ಲಡಾಖ್ ವ್ಯಾಪ್ತಿಯಲ್ಲಿಸರಣಿ ಭೂಕಂಪ

ಬೆಂಗಳೂರು, ಜೂನ್ 18, 2023 (www.justkannada.in):

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಐದು ಲಘು ತೀವ್ರತೆಯ ಭೂಕಂಪ ಸಂಭವಿಸಿದೆ.

ಶನಿವಾರ ಮಧ್ಯಾಹ್ನ 2.03 ಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ 3.0 ತೀವ್ರತೆಯ ಭೂಕಂಪದ ನಂತರ ಮತ್ತೆ ಕಂಪನದ ಅನುಭವವಾಗಿದೆ.

ಈ ಕುರಿತು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮಧ್ಯಾಹ್ನ 2.03 ಗಂಟೆಗೆ ಸಂಭವಿಸಿದ 3.0 ತೀವ್ರತೆಯ ಕಂಪನದ ಕೇಂದ್ರಬಿಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಗುಡ್ಡಗಾಡು ಜಿಲ್ಲೆಯಲ್ಲಿತ್ತು ಎಂದು ತಿಳಿಸಿದ್ದಾರೆ.

ಭೂಕಂಪದ ಆಳವು 33.31 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.19 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ಮೈಯಿಂದ ಐದು ಕಿಲೋಮೀಟರ್ ಕೆಳಗೆ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತ – ಚೀನಾ ಗಡಿಯಲ್ಲಿ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ರಾತ್ರಿ 9.55 ಕ್ಕೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.