ಬೆಂಗಳೂರು, ಜೂನ್ 26,2023(www.justkannada.in): ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಸಿಎಂ ಸಿದ‍್ಧರಾಮಯ್ಯ ಮಾತನಾಡಿದರು.
ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ. ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ದವಾಗಿ ಸದನದ ಮುಂದೆ ಮಂಡಿಸಬಹುದು ಎಂದರು.
ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ. ಜನಪರ ನಿಲುವು, ಜನಪರ ಭಾಷೆ, ವಿಷಯ ತಜ್ಞತೆ, ಅಧ್ಯಯನಶೀಲತೆ, ಸಿದ್ಧತೆ ಮತ್ತು ತರಬೇತಿ ಪ್ರತಿ ಶಾಸಕರಿಗೆ ಅತ್ಯಗತ್ಯ ಎಂದರು.
ಬಸವಣ್ಣನವರ ಬಜೆಟ್
ಶಾಸಕರು ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.
ನೂರು ಕುರಿ ಎಣಿಸಕ್ಕೆ ಬಾರದವನು
ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ “ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾರೆ?” ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ “THE HINDU” ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಿ ಎಂದು ತಮ್ಮದೇ ಉದಾಹರಣೆ ಮೂಲಕ ಶಾಸಕರಿಗೆ ತಿಳಿ ಹೇಳಿದರು.
ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಈಶ್ವರಪ್ಪ ಶಾಸಕರಾಗಲು ಸಾಧ್ಯವಿರಲಿಲ್ಲ
ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ಸಂವಿಧಾನದ ಮೌಲ್ಯ ಅರಿತುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವರಿಕೆ ಮಾಡಿಸಿದರು.
ವಾಟಾಳ್ ನಾಗರಾಜ್ ಮಾಡೆಲ್
ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಿ ಎಂದು ಸೂಚಿಸಿದರು.
ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಸತಿ ಸಚಿವ ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಉಪಸ್ಥಿತರಿದ್ದರು.
ENGLISH SUMMARY..
People respect and vote for those who do not abhor sweat-toil culture
Popular stance, popular language, subject matter expertise, studiousness, preparation and training are essential for every MLA
Money, greed and power not enough for Politics
Learn parliamentary language and become a subject expert: Chief Minister’s advice to MLAs
Bangalore, June 26: Assembly is the temple of democracy. Chief Minister Siddaramaiah called upon legislators to raise people’s problems effectively in assembly and develop a mindset to seek solutions.
He was speaking after inaugurating the training camp organized for the newly elected MLAs of the 16th Legislative Assembly.
‘Those who do not read and understand the constitution cannot become good legislators and parliamentarians. So read the constitution and understand its basic principles and objectives. We made the rules of the House ourselves. He said that if you read and understand it properly, people’s problems can be brought before the house in a proper manner.’
The CM added that we cannot make laws contrary to the Constitution. Therefore, reading the constitution is essential, he said.
Basavanna’s Budget
MLAs and MPs should understand the meaning of budget. In the 12th century Kayakayogi Basavanna spoke about budget. Kayaka and Dasoha are the key facts of the budget. Kayaka means production, Dasoha means sharing. He explained that the value of the budget is just understanding from where the production is got and to whom we distribute it in the society.
UT Khader Farid, Speaker of the Assembly, Basavaraja Horatti, Speaker of Legislative Council,
Housing Minister Jameer Ahmed Khan, Assembly Secretary Vishalakshi were present.
box
He who cannot count a hundred sheep
“How can a person who cannot count a hundred sheep present a budget?” A newspaper had criticized when I first became Finance Minister. I accepted the criticism as a challenge and discussed it with subject matter experts and presented the budget. The next day “THE HINDU” newspaper wrote an editorial praising my budget as the best. Through his own example, the CM told the legislators to develop a thirst for knowledge.
Box 1
* CT Ravi, Eshwarappa could not have become legislators without the Constitution *
It is because of the Constitution given by Dr. Ambedkar that people like me can become MLAs and Chief Ministers. If there was no constitution, CT Ravi, KS Eshwarappa and I would have been shepards. Therefore, it is important to understand the values of the Constitution, the Chief Minister said.
Vatal Model
Vatal Nagaraj was a model MLA who would be inside the assembly as soon as the session bell rang. He would be seated till the end of the session. The CM asked the legislators to follow him.
Speech Highlights*
* Make a difference
* Understand why the State still remembers Shantaveri Gopal Gowda
* Out of 224 MLAs, 70 have entered the Legislative Assembly for the first time.
* Former MP and former Union Minister KH Muniyappa, former Minister Janardhana Reddy entered the Legislative Assembly for the first time.
*The first budget of the state was only 21 crores 3 lakhs.
* The current budget is 3 lakh 9 thousand crores.
* Five guarantees announced for the benefit of the poor and the middle class will require 50 thousand crores.
Key words: People- Stand –MLA-Learn -Parliamentary Language Expert-CM Siddhiramaiah