ಬೆಂಗಳೂರು,ಜೂನ್,28,2023(www.justkannada.in): ಅಕ್ಕಿ ಕೊರತೆ ಹಿನ್ನೆಲೆ ಬಿಪಿಎಲ್ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಬದಲು ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಕೊರತೆಯಾಗಿರುವ ಹಿನ್ನೆಲೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪ್ರತಿ 1ಕೆಜಿ ಅಕ್ಕಿಗೆ 34 ರೂ ನಂತೆ 170 ರೂಪಾಯಿಯನ್ನ ನೀಡುತ್ತೇವೆ. ಪಡಿತರ ಕಾರ್ಡು ದಾರರಿಗೆ ಮಾಸಿಕ ತಲಾ 170 ರೂ ನೀಡುತ್ತೇವೆ. ಜುಲೈ ತಿಂಗಳಿಂದಲೇ ಬಿಪಿಎಲ್ ಫಲಾನುಭವಿಗಳ ಖಾತೆಗೆ ಹಣವನ್ನ ನೇರವಾಗಿ ವರ್ಗಾವಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಈ ಮೂಲಕ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ, ರಾಜ್ಯದ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನ ಸರ್ಕಾರ ಪಾವತಿ ಮಾಡಲಿದೆ ಎನ್ನಲಾಗಿದೆ.
Key words: Cabinet -meeting -decided – money- instead – 5 kg of rice.