ಬೆಂಗಳೂರು,ಜುಲೈ ,1,2023(www.justkannada.in): ಇಂದಿನಿಂದ ಬಿಪಿಎಲ್ ಕಾರ್ಡುದಾರರಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. 1.29 ಲಕ್ಷ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಹಾಕುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಬಿಪಿಎಲ್ ಕಾರ್ಡ್ ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ತಲಾ 170 ರೂ ಹಣ ಹಾಕುತ್ತೇವೆ. 10 ದಿನದವರೆಗೆ ಬಿಪಿಎಲ್ ಕಾರ್ಡುದಾರರಿಗೆ ಹಣ ಹಾಕುತ್ತೇವೆ . ಶೇ.90 ರಷ್ಟು ಬಿಪಿಎಲ್ ಕಾರ್ಡುದಾರರ ಅಕೌಂಟ್ ಗೆ ಆಧಾರ್ ಲಿಂಕ್ ಆಗಿರುತ್ತದೆ. ಶೇ. 10ರಷ್ಟು ಜನರು ಅಕೌಂಟ್ ಮಾಡಿಸದೇ ಇರಬಹುದು. ಎಲ್ಲಾ ಬಿಪಿಎಲ್ ಕಾರ್ಡುದಾರರಿಗೂ ಹಣ ನೀಡುತ್ತೇವೆ ಎಂದರು.
Key words: 1.29 lakh – account – BPL –cardholders- Food Minister -KH Muniappa.