ನವವದೆಹಲಿ,ಜುಲೈ,1,2023(www.justkannada.in): ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 11ಕ್ಕೆ ಮುಕ್ತಾಯವಾಗಲಿದೆ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಸಂಸತ್ ಕಲಾಪಗಳು ಸುಗಮವಾಗಿ, ಸರಾಗವಾಗಿ ಮತ್ತು ದೇಶದ ಜನರಿಗೆ ಉಪಯೋಗವಾಗುವಂತಹ ಚರ್ಚೆಗಳನ್ನು ಕಲಾಪ ವೇಳೆ ನಡೆಸಿಕೊಂಡು ಹೋಗಲು ಎಲ್ಲಾ ಪಕ್ಷಗಳ ಸದಸ್ಯರು ಸಹಕಾರ ನೀಡಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮನವಿ ಮಾಡಿದ್ದಾರೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ವಿರೋಧ ಪಕ್ಷಗಳು ಇತ್ತೀಚೆಗೆ ಸಭೆ ಸೇರಿ ನಿರ್ಧಾರ ತೆಗೆದುಕೊಂಡಿವೆ. ಹೀಗಾಗಿ ಅಧಿವೇಶನವು ಈ ಬಾರಿ ಕುತೂಹಲದಿಂದ ಕೂಡಿದೆ.
ಇದರ ಜೊತೆಗೆ, ಏಕರೂಪ ನಾಗರಿಕ ಸಂಹಿತೆಗಾಗಿ ಪ್ರಧಾನಿ ಮೋದಿ ಅವರು ಬಲವಾಗಿ ಪ್ರದಿಪಾದಿಸಿರುವ ಸಂದರ್ಭದಲ್ಲಿ ಈ ವಿಷಯದ ಕುರಿತು ಸಮಾಲೋಚನೆಗಳನ್ನು ನಡೆಸುವ ಸಂದರ್ಭದಲ್ಲಿ ಸಂಸತ್ತು ಕಲಾಪ ನಡೆಯಿತ್ತಿದೆ.
Key words: Monsoon-Session -Parliament -June 20.