ತುಮಕೂರು,ಜುಲೈ,3,2023(www.justkannada.in): ಅಭಿವೃದ್ಧಿ ಕಾರ್ಯ ಮಾಡಿದಕ್ಕೆ ರಾಜ್ಯದ ಜನತೆ ಪ್ರತಿಫಲ ಕೊಡುತ್ತಾರೆ ಅಂದುಕೊಂಡಿದ್ದೆ. ಆದರೇ, ಉಚಿತ ಭಾಗ್ಯದ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಇಂದು ಮಾತನಾಡಿದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ, ಉಚಿತ ಭಾಗ್ಯ ಮುಂದುವರಿದರೆ ಚುನಾವಣೆ ಮಾಡುವುದು ತುಂಬಾ ಕಷ್ಟವಾಗುತ್ತೆ. ರಾಜ್ಯದ ತೆರಿಗೆದಾರರ ದುಡ್ಡು ಇಷ್ಟ ಬಂದ ಹಾಗೇ ಹಂಚುತ್ತೇನೆ ಅಂದರೇ ಮನೆಯಲ್ಲಿ ಕೂತವರಿಗೆ ಹಂಚುತ್ತೇನೆ ಅಂದರೇ ರಾಜ್ಯದ ಪರಿಸ್ಥಿತಿ ಏನಾಗಬೇಡ. ಕಾಂಗ್ರೆಸ್ ಮಾಡಿದ ಪಾಪಕ್ಕೆ ಮೋದಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆದರು.
ರಾಜ್ಯದಲ್ಲಿ ನಾವು ಕನಿಷ್ಠ 7 ಕೆಜಿ ಅಕ್ಕಿ ಕೊಡಬೇಕೆಂದು ಪ್ರಯತ್ನಿಸಿದ್ದೇವೆ. ಆದರೆ ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಲ್ಲ. ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಆಹಾರ ಭದ್ರತಾ ಕಾಯ್ದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ. 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ತಿಂಗಳಿಗೆ 5 ಕೆಜಿ ಅಕ್ಕಿ ಕೊಡಲಾಗುತ್ತಿದೆ ಎಂದು ಜೆ.ಸಿ ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ ಸಂದರ್ಭದಲ್ಲಿ ನೀಡುತ್ತಾರೆ. ನಮ್ಮಲ್ಲಿ ಅಕ್ಕಿ ಇದೆ ಎಂದು ಹೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ? ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೇ ಕೊಡುತ್ತಾರೆ. ಮನೆಯಲ್ಲಿ ಕಷ್ಟ ಕಾಲಕ್ಕೆ ಆಗಲಿ ಎಂದು ಹಣವನ್ನು ಕೂಡಿಡುತ್ತಾರೆ. ಅದನ್ನು ನಾನು ಸಿನಿಮಾ ನೋಡುವುದಕ್ಕೆ ಹೋಗಬೇಕು ಹಾಗೂ ಸ್ವೀಟ್ ತಿನ್ನೋಕೆ ಕೊಡು ಅಂದ್ರೆ ಕೊಡಲು ಆಗುತ್ತಾ? ಎಂದು ಜೆಸಿ ಮಾಧುಸ್ವಾಮಿ ಕಿಡಿಕಾರಿದರು.
Key words: Our work – in front – Guarantee scheme-former minister- JC Madhuswamy