ಕೊಲಂಬೊ, ಸೆಪ್ಟೆಂಬರ್ 29, 2019 (www.justkannada.in): ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ನರ್ ಅಜಂತಾ ಮೆಂಡಿಸ್ ಎಲ್ಲಾ ಆವೃತ್ತಿಯ ಕ್ರಿಕೆಟ್ಗೂ ವಿದಾಯ ಘೋಷಿಸಿದ್ದಾರೆ.
34 ವರ್ಷದ ಮೆಂಡಿಸ್ ನ್ಯೂಜಿಲೆಂಡ್ ವಿರುದ್ಧ 2015 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2008ರ ಏಪ್ರಿಲ್ನಲ್ಲಿ ವಿಂಡೀಸ್ ವಿರುದ್ಧ 39 ರನ್ ನೀಡಿ 3 ವಿಕೆಟ್ ಪಡೆದು ಇವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ವಿಶ್ವ ಕ್ರಿಕೆಟ್ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತ ಮೆಂಡಿಸ್ ಓರ್ವ ಅಪೂರ್ವ ಕ್ರಿಕೆಟಿಗನಾಗಿದ್ದರು. ಒಟ್ಟು 87 ಏಕದಿನ ಪಂದ್ಯಗಳನ್ನು ಆಡಿದ ಮೆಂಡಿಸ್ 152 ವಿಕೆಟ್, 39 ಟಿ-20ಯಲ್ಲಿ 66 ವಿಕೆಟ್ ಹಾಗೂ 19 ಟೆಸ್ಟ್ ಪಂದ್ಯದಲ್ಲಿ 70 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.