ಮೈಸೂರು,ಜುಲೈ,12,2023(www.justkannada.in): ಟಿ ನರಸೀಪುರ ಕೊಲೆ ವಿಚಾರ ಮುಂದಿಟ್ಟುಕೊಂಡು ಈ ಭಾಗದಲ್ಲಿ ಕೋಮು ಗಲಭೆ ಹರಡಲು ಸಾಧ್ಯವಿಲ್ಲ. ಇದು ಕರಾವಳಿ ಭಾಗವಲ್ಲ,ಇಲ್ಲಿ ನೀವು ಕೋಮು ಭಾವನೆ ಕೆರಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟಾಂಗ್ ನೀಡಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಾಂತಿ ಕದಡಲು ಮುಂದಾಗಿರುವ ಆರೋಪದಡಿ ಪೊಲೀಸರ ಬಳಿ ಪ್ರಕರಣ ದಾಖಲಿಸುತ್ತೇವೆ. ಕೊಲೆಯ A4 ಆರೋಪಿ ಬಿಜೆಪಿ ಪಾಲಿಕೆ ಸದಸ್ಯೆಯ ತಮ್ಮನಾಗಿದ್ದು ಇದಕ್ಕೇನು ಹೇಳುತ್ತೀರಿ?. A4 ಆರೋಪಿಯೇ ಚಕ್ರವರ್ತಿ ಸೂಲಿಬೆಲೆಯನ್ನು ರಾತ್ರೋರಾತ್ರಿ ಕರೆಸಿದ್ದಾನೆ. ಚಕ್ರವರ್ತಿ ಸೂಲಿಬೆಲೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಸಿ ಟಿ ರವಿ ಓರ್ವ ರೌಡಿಶೀಟರ್: ಕಾರು ಹರಿಸಿ ನಾಲ್ವರನ್ನು ಕೊಂದ ಆರೋಪ ಹೊತ್ತಿದ್ದಾರೆ.
ಇದೇ ವೇಳೆ ಸಿ.ಟಿ ರವಿ ವಿರುದ್ದ ಕಿಡಿಕಾರಿದ ಎಂ.ಲಕ್ಷ್ಮಣ್, ಸಿ ಟಿ ರವಿ ಓರ್ವ ರೌಡಿಶೀಟರ್. ಸಿ ಟಿ ರವಿ ಕಾರು ಹರಿಸಿ ನಾಲ್ವರನ್ನು ಕೊಂದ ಆರೋಪ ಹೊತ್ತಿದ್ದಾರೆ. ಅವರನ್ನು ಬಿಜೆಪಿ ಸತ್ಯಶೋಧನಾ ಸಮಿತಿಗೆ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಕೂಡ ಹಲವಾರು ಪ್ರಕರಣ ದಾಖಲಾಗಿವೆ. ಅವರನ್ನು ಸತ್ಯಶೋಧನಾ ನಮಿತಿ ಸದಸ್ಯನಾಗಿ ನೇಮಕ ಮಾಡಲಾಗಿದೆ. ಕ್ರಿಮಿನಲ್ ಆರೋಪಕ್ಕೆ ಗುರಿಯಾಗಿರುವ ಇಂತಹವರು ಯಾವ ಸತ್ಯಶೋಧನೆ ಮಾಡುತ್ತಾರೆ? ಎಂದು ಲೇವಡಿ ಮಾಡಿದರು.
ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಕನ್ನಡವನ್ನ ವ್ಯಂಗ್ಯ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಬಸವನಗೌಡ ಪಾಟೀಲ್ ಯತ್ನಾಳ್ ಮರಾಠಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯು.ಟಿ ಖಾದರ್ ಸ್ಪೀಕರ್ ಆಗಿರುವುದನ್ನೇ ಬಿಜೆಪಿಯವರು ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಯು ಟಿ ಖಾದರ್ ಬಗ್ಗೆ ವ್ಯಂಗ್ಯ ಮಾಡ್ತಿದಾರೆ.
ಹೆಚ್. ಡಿ ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳಲು,ಜೆಡಿಎಸ್ ಬದುಕಿದೆ ಎಂದು ತೋರಿಸಿಕೊಳ್ಳಲು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೆಚ್.ಡಿಕೆ ವಿರುದ್ದವೂ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗುಡುಗಿದರು.
Key words: A4 Accused- meet–Chakravorty Sulibele- M. Laxman