ಮೈಸೂರು,ಆ,30,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ಸಮನ್ಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಯಾರು ಅಧಿಕಾರ ದುರುಪಯೋಗ ಮಾಡುವಂತ ಕೆಲಸ ಮಾಡಬಾರದು.ಅಧಿಕಾರ ದುರುಪಯೋಗವಾಗುವಂತಹ ಕೆಲಸವಾಗುತ್ತಿದೆ ಎಂದು ಅನಿಸುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಕಾನೂನು ಹೋರಾಟ ಮಾಡ್ತಾ ಇದಾರೆ.ಹೈಕೋರ್ಟ್ ನಲ್ಲಿ ವಜಾ ಆಗಿರುವ ಹಿನ್ನೆಲೆ. ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ. ಚಿದಂಬರಂರನ್ನ ಅರೆಸ್ಟ್ ಮಾಡುವಂತ ಕೇಸಲ್ಲ. ನ್ಯಾಚುರಲ್ ಜಸ್ಟಿಸ್ ಇರಬೇಕು. ಅದು ಕಾಣೆಯಾಗುತ್ತಿದೆ ಎಂದು ಕಿಡಿಕಾರಿದರು.
ಮುಂದಿನ ದಿನದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತೇವೆ..
ನೆರೆಗೆ ಪರಿಹಾರ ಬಿಡುಗಡೆಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಿನ್ನೆ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಸಾಂಕೇತಿಕವಾಗಿ ನಿನ್ನೆ ಧರಣಿ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಹಣ ಬಂದಿಲ್ಲ. ಪ್ರವಾಹ ಪರಿಹಾರ ಕೆಲಸವಾಗಿಲ್ಲ. ಅವರುಗಳು ರಾಜಕೀಯದಲ್ಲಿ ಮುಳುಗಿದ್ದಾರೆ. ಹೀಗಾಗಿ ಸರ್ಕಾರದ ಎಚ್ಚರಿಕೆ ಕೊಡಲು ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ವಾಸು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಶಾಸಕ ವಾಸು ಮನೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಶಾಸಕ ವಾಸು ಅವರ ಆರೋಗ್ಯ ವಿಚಾರಿಸಿದರು. ವಾಸು ಅವರು ಹೃದಯ ಶಸ್ತ್ರ. ಚಿಕಿತ್ಸೆ ಗೆ ಒಳಗಾಗಿದ್ದರು.
Key words: Work – abused.-Siddaramaiah-ED summons -to -former minister -DK Sivakumar