ಮೈಸೂರು,ಜುಲೈ,25,2023(www.justkannada.in): ನಂದಿನ ಹಾಲಿನ ದರ ಏರಿಕೆ ಜೊತೆಯಲ್ಲಿ ರೈತರ ಕೋಟಾ ಕಡಿಮೆ ಮಾಡಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ.
ರೈತರಿಗೆ ಪ್ರತಿ ಲೀಟರ್ ಹಾಲಿಗೆ 1ರೂ 50ಪೈಸೆ ಹಣ ಖಡಿತ ಮಾಡಲು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆದೇಶ ಹೊರಡಿಸಿದೆ. ಇಂದಿನಿಂದಲೇ ಆದೇಶ ಜಾರಿಯಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಹಾಲಿನ ಶೇಖರಣೆ ಶೇ 6ರಷ್ಟು ಹೆಚ್ಚಾಗಿದೆ. ಆರ್ಥಿಕ ಹೊರೆ ಸರಿದೂಗಿಸಲು ಒಕ್ಕೂಟ ದರ ಪರಿಷ್ಕರಿಸಿದ್ದು, 20-07-2023ರ ಸಭೆಯಲ್ಲೇ ಪರಿಷ್ಕೃತ ದರ ನಿಗದಿ ಮಾಡಲು ತೀರ್ಮಾನ ಕೈಗೊಂಡಿದೆ. ಪರಿಷ್ಕೃತ ದರದ ಅನ್ವಯ ಸಂಘಗಳಿಂದ ರೈತರಿಗೆ ಕೇವಲ 31ರೂ 52 ಪೈಸೆ ಮಾತ್ರ ಸಂದಾಯವಾಗಲಿದೆ. ಆದರೆ ಗ್ರಾಹಕರಿಗೆ ನೀಡುವ ಹಾಲಿನ ದರವನ್ನು ಸರ್ಕಾರ 3 ರೂ ಹೆಚ್ಚಳ ಮಾಡಿದೆ. ಗ್ರಾಹಕ ಜೇಬಿನ ಜೊತೆಗೆ ರೈತ ಕಿಸೆಯನ್ನೂ ಸರ್ಕಾರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ.
1 ರೂಪಾಯಿ 50 ಪೈಸೆ ಹಣ ಕಡಿತ ಮಾಡದಿದ್ದರೇ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ 56 ಕೋಟಿ ರೂ. ನಷ್ಟವಾಗಲಿದ್ದು, ಹೀಗಾಗಿ ಒಕ್ಕೂಟ ಈ ತೀರ್ಮಾನ ಕೈಗೊಂಡಿದೆ.
-V.Mahesh kumar
Key words: 1.50 rupee- Cut – per liter -milk -farmers- Mymul.