ಬೆಂಗಳೂರು,ಜುಲೈ,28,2023(www.justkannada.in): ಹೆಪಟೈಟಿಸ್ ವೈರಸ್ ಗಳು ಸಾಂಕ್ರಾಮಿಕವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇವುಗಳು ಸಾವನ್ನ ಕೂಡ ಉಂಟು ಮಾಡಬಹುದು. ಹೀಗಾಗಿ ಆರೋಗ್ಯಕರವಾದ ಆಹಾರ ಸೇವಿಸುತ್ತಾ ಲಿವರ್ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಆಸ್ಪತ್ರೆ ಎಂಡಿ ಡಾ.ಉಮೇಶ್ ಜಾಲಿಹಾಳ್ ಹೇಳಿದರು.
ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ವತಿಯಿಂದ ಇಂದು ಮ್ಯಾರಥಾನ್ ಏರ್ಪಿಡಿಸಿತ್ತು. ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಮಾಜಿಸಚಿವ ಗೋಪಾಲಯ್ಯ, ಮಾಜಿ ಶಾಸಕ ನರೇಂದ್ರ ಬಾಬು, ಆಸ್ಪತ್ರೆ ಎಂಡಿ ಡಾ.ಉಮೇಶ್ ಜಾಲಿಹಾಳ್ ಮೊದಲಾದವರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಡಾ.ಉಮೇಶ್ ಜಾಲಿಹಾಳ, ಯಕೃತ್ತಿನ (ಲಿವರ್) ಉರಿಯೂತದಿಂದ ಉಂಟಾಗುವ ಕಾಯಿಲೆಯೇ ಹೆಪಟೈಟಿಸ್. ಎ, ಬಿ, ಸಿ, ಡಿ ಮತ್ತು ಇ ಇವು ಐದು ಪ್ರಮುಖವಾದ ಹೆಪಟೈಟಿಸ್ ವೈರಸ್ ಗಳು. ಬಿ ಮತ್ತು ಸಿ ವಿಧಗಳು ಲಕ್ಷಾಂತರ ಜನರಲ್ಲಿ ದೀರ್ಘಕಾಲದ ಕಾಯಿಲೆಗೆ ಕಾರಣವಾಗುತ್ತದೆ. ಇವು ಯಕೃತ್‌ನ ಸಿರೋಸಿಸ್ ಮತ್ತು ಕ್ಯಾನ್ಸರ್ ಗೆ ಸಾಮಾನ್ಯ ಕಾರಣವಾಗಿದೆ ಎಂದು ವಿವರಿಸಿದರು.
Key words: World Hepatitis Day- Marathon -Karnataka -Gastro Center..