2022ರ ಹುಲಿ ಗಣತಿಯ ರಾಜ್ಯವಾರು ವರದಿ ಬಿಡುಗಡೆ: ಕರ್ನಾಟಕಕ್ಕೆ 2ನೇ ಸ್ಥಾನ.

ನವದೆಹಲಿ,ಜುಲೈ,29,2023(www.justkannada.in):  ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರವು 2022ನೇ ಸಾಲಿನ ಹುಲಿಗಣತಿಯ ರಾಜ್ಯವಾರು ವರದಿ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 2ನೇ ಸ್ಥಾನ ಲಭಿಸಿದೆ.

ಹುಲಿಗಣತಿಯಲ್ಲಿ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದ್ದು 785 ಹುಲಿಗಳು ಈ ರಾಜ್ಯದಲ್ಲಿದೆ. ಇನ್ನು ಮೊದಲ ಸ್ಥಾನದ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ನಿರಾಸೆಯಾಗಿದ್ದು 563 ಹುಲಿಗಳನ್ನ ಹೊಂದಿದೆ. ಇನ್ನು ಉತ್ತರಾಖಂಡ್ ನಲ್ಲಿ 560 ಹುಲಿಗಳಿದ್ದು ಈ ರಾಜ್ಯ ಮೂರನೇ ಸ್ಥಾನದಲ್ಲಿದೆ.

ಸದ್ಯ ಭಾರತದಲ್ಲಿ 3682 ಹುಲಿಗಳಿವೆ ಎಂಬುದು ಹುಲಿಗಣತಿಯ ವರದಿಯಲ್ಲಿ ತಿಳಿದು ಬಂದಿದೆ.

Key words: 2022 tiger -census -state –wise- report –release-2nd place – Karnataka