ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನ ಆರೋಪ:  ಇಬ್ಬರ ವಿರುದ್ದ ಪ್ರಕರಣ ದಾಖಲು.

ಬೆಂಗಳೂರು, ಜುಲೈ,,29,2023(www.justkannada.in): ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನಿಸಿದ ಇಬ್ಬರು ಯುವಕರ  ವಿರುದ್ದ ಪ್ರಕರಣ ದಾಖಲಾಗಿದೆ.

ವಿಧಾನಸೌಧದ ಪೂರ್ವ ದ್ವಾರದ ಬಳಿ ಇಂದು ಡ್ರೋನ್ ಹಾರಾಟಕ್ಕೆ ಯತ್ನಿಸಿದ್ದ ಇಬ್ಬರು ಇವೆಂಟ್ ಮ್ಯಾನೇಜ್​ಮೆಂಟ್ ಯುವಕರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಹಿ‌ನ್ನೆಲೆ ವಿಧಾನಸೌಧ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಅರುಣ್​ ಮತ್ತು ವಿನೋದ್ ಎಂಬ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಇಬ್ಬರಿಗೂ ಸ್ಟೇಷನ್​ ಬೇಲ್​​ ನೀಡಿ ಕಳುಹಿಸಲಾಗಿದೆ.

ಖಾಸಗಿ ಕಂಪನಿಯೊಂದರ 15 ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ವಿಧಾನಸೌಧದ ವಿಡಿಯೋ ಚಿತ್ರೀಕರಣಕ್ಕೆ ಇಬ್ಬರು ಯುವಕರು ಬಂದಿದ್ದರು. ಡ್ರೋನ್ ಹಾರಿಸುವುದು ನಿರ್ಬಂಧಿಸಿರುವ ವಿಚಾರ ತಿಳಿಯದೆ ಹಾರಿಸಲು ಯತ್ನಿಸಿದ್ದಾಗಿ ಪೊಲೀಸ್​​ ವಿಚಾರಣೆಯಲ್ಲಿ ತಿಳಿದುಬಂದಿದೆ.

Key words: Allegation -attempt – fly drone- near-Vidhan soudha- case – registered