ಬೆಂಗಳೂರು,ಆ,30,2019(www.justkannada.in): ನನ್ನ ವಿರುದ್ದ ದೊಡ್ಡ ಷಡ್ಯಂತ್ರ ಮಾಡಲಾಗುತ್ತಿದೆ. ನಾನು ಎಲ್ಲವನ್ನು ಎದರಿಸೋಕೆ ನಾನು ಸಿದ್ಧ. ಹೆದರಿ ಅವಿತು ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ: ಕಾನೂನಿನ ರೀತಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವ ಕುಮಾರ್ ತಿಳಿಸಿದರು.
ದೆಹಲಿ ನಿವಾಸದಲ್ಲಿ ಐಟಿ ದಾಳಿ ವೇಳೆ ಹಣ ಪತ್ತೆಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದಕ್ಕೂ ಮುನ್ನ ಸದಾಶಿವನಗರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಸರ್ಕಾರಕ್ಕೆ ಮೋಸ ಮಾಡಿಲ್ಲ. ಭ್ರಷ್ಟಾಚಾರ ಮಾಢಿಲ್ಲ. ಲಂಚ ಪಡೆದಿಲ್ಲ ಎಂದು ಕೋರ್ಟ್ ಗೆ ಹೇಳಿದ್ದೆ. ಕೋರ್ಟ್ ನನ್ನ ಅರ್ಜಿ ವಜಾಗೊಳಿಸಿದೆ. ನಾನು ಮೇಲ್ಮನವಿ ಸಲ್ಲಿಸುತ್ತೇನೆ. ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು…
ಪಕ್ಷದ ಕಾರ್ಯಕರ್ತನಾಗಿ ನಾಯಕನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನ ನಿರ್ವಹಿಸಿದ್ದೇನೆ. ಗುಜರಾತ್ ಮಹಾರಾಷ್ಟ್ರ ಶಾಸಕರನ್ನ ಕಾಪಾಡುವ ಜವಾಬ್ದಾರಿಯನ್ನ ಪಕ್ಷ ನೀಡಿದ ಜವಾಬ್ದಾರಿಯನ್ನ ನಿರ್ವಹಿಸಿದ್ದೇನೆ. ನನ್ನ ಹೋರಾಟದಲ್ಲಿ ಕೆಲವರು ಸಂತೋಷಪಟ್ಟಿರಬಹುದು ದುಃಖಪಟ್ಟಿರಬಹುದು. ಪ್ರಜಾಪ್ರಭುತ್ವದಲ್ಲಿ ನಾನು ಏನು ಮಾತನಾಡೋಕೆ ಆಗಲ್ಲ.
ನಮ್ಮ ಮನೆಯಲ್ಲಿ ಸ್ನೇಹಿತರ ಮನೆಯಲ್ಲಿ ಸಿಕ್ಕಿದ್ದ ಹಣ ನಮ್ಮದೆ. ಅದಕ್ಕೆ ಆದಾಯ ತೆರಿಗೆ ಇಲಾಖೆಗೆ ದಾಖಲೆ ಕೊಟ್ಟಿದ್ದೇವೆ. ನಮ್ಮ ತಾಯಿಯ ಆಸ್ತಿ ಎಲ್ಲಾ ಬೇನಾಮಿ ಆಸ್ತಿ ಎಂದಿದ್ದಾರೆ. ನನ್ನನ್ನ ಟಾರ್ಗೆಟ್ ಮಾಡಿ ಇಡಿ ದಾಳಿ ನಡೆಸಲಾಗಿದೆ. ನನ್ನ ವಿರುದ್ದ ದೊಡ್ಡ ಷಡ್ಯಂತ್ರ ಮಾಡಲಾಗುತ್ತಿದೆ. ಆದರೇ ಎಲ್ಲವನ್ನು ಎದರಿಸೋಕೆ ನಾನು ಸಿದ್ಧ. ನಾನು ಹೆದರಿ ಓಡಿ ಹೋಗುವ ಕೆಂಪೇಗೌಡರ ಮಗ ಅಲ್ಲ. ನಾನು ಸಾಮಾಜಿಕವಾಗಿ, ರಾಜಕೀಯವಾಗಿ ಎಲ್ಲವನ್ನೂ ಎದರಿಸುತ್ತೇನೆ. ಇಂದು ಒಂದು ಗಂಟೆಗೆ ವಿಚಾರಣೆಗೆ ಹಾಜರಾಗಲು ಆಗಲ್ಲ. ಆದರೆ ಇಂದೇ ವಿಚಾರಣೆಗೆ ಹಾಜರಾಗುತ್ತೇನೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ.
ನಾನು ತಪ್ಪು ಮಾಡಿಲ್ಲ. ಭ್ರಷ್ಟಾಚಾರ ಮಾಢಿಲ್ಲ. ಲಂಚ ಪಡೆದಿಲ್ಲ ಎಂದು ಕೋರ್ಟ್ ಗೆ ಹೇಳಿದ್ದೆ. ಕೋರ್ಟ್ ನನ್ನ ಅರ್ಜಿ ವಜಾಗೊಳಿಸಿದೆ. ನಾನು ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಸರ್ಕಾರಕ್ಕೆ ಮೋಸ ಮಾಡಿಲ್ಲ.
ನನ್ನ ಹಾಗೂ ನನ್ನ ಸ್ನೇಹಿತರ ಮೇಲೆ ಇಡಿ ದಾಳಿ ರೆಸಾರ್ಟ್ ನಲ್ಲಿ ಇದ್ದಾಗ ದಾಳಿ ನಡೆದಿತ್ತು. ನಾನೊಬ್ಬ ನ್ಯಾಯಾಂಗದ ಬಗ್ಗೆ ಗೌರವ ಇಟ್ಟುಕೊಂಡವನು. ನ್ಯಾಯಾಂಗಕ್ಕೆ, ಶಾಸಕಾಂಗಕ್ಕೆ ಏನೆಲ್ಲಾ ಗೌರವಕೊಡಬೇಕೋ ಕೊಟ್ಟಿದ್ದೇನೆ. ನನ್ನ ಕರ್ತವ್ಯಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ.
ಅನೇಕ ಸಲ ಅನೇಕ ನೋಟೀಸ್ ಗಳು ಬಂದಿದ್ದಾವೆ. ಆ ಬಗ್ಗೆ ನಮ್ಮ ಆಡಿಟರ್ ಕರೆಸಿ ಕೆಲವೊಂದಕ್ಕೆ ಉತ್ತರ ಕೊಟ್ಟಿದ್ದೇನೆ. 84 ವರ್ಷದ ನನ್ನ ತಾಯಿ ಒಬ್ಬ ಮಗ ಸಂಸತ್ ಸದಸ್ಯ ಇದ್ದಾನೆ. ಮತ್ತೊಬ್ಬ ಶಾಸಕನಿದ್ದಾನೆ. ಗಂಡನಿಲ್ಲದಾಗ, ಮಕ್ಕಳ ಮೇಲೆ ಅಪೇಕ್ಷೆ ಇದೆ. ನಾನು ಬಡತನದಿಂದ ಬಂದವನು ನಾನು ಎಂದು ಹೇಳುವುದಿಲ್ಲ. ಮಧ್ಯಮವರ್ಗದಿಂದ ಬಂದವನು.
ಇಂತಹ ಕುಟುಂಬದಿಂದ ಬಂದ ನಾನು, ನನ್ನ ತಾಯಿಯ ಎಲ್ಲಾ ಆಸ್ತಿಯನ್ನು ನನಗೆ ನೀಡಲಾಗಿದೆ. ಇಂತಹ ಆಸ್ತಿಯ ಮೇಲೆ ಬೇನಾಮಿ ಆಸ್ತಿ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮಗ ತಾಯಿ ನಂಬದೇ, ತಾಯಿ ಮಗನನ್ನು ನಂಬದೇ ಯಾರನ್ನು ನಂಬಿ ನಡೆದುಕೊಂಡು ಹೋಗಬೇಕು.?
ಅಪರೇಷನ್ ಕಮಲದ ಬಗ್ಗೆ ಸದನದಲ್ಲೆಲ್ಲಾ ಚರ್ಚೆಯಾಗಿದೆ. ಹಣವನ್ನ ನನ್ನ ಮನೆಗೆ ತಂದು ಕೊಟ್ಟಿದ್ದಾರೆಂದು ಬಹಿರಂಗವಾಗಿ ಶಾಸಕರೊಬ್ಬರು ಹೇಳಿದ್ದಾರೆ. ಹೀಗಿದ್ದರೂ ಇಡಿ ಅವರಿಗೆ ನೋಟೀಸ್ ನೀಡಿಲ್ಲ. ಆದರೆ ನನಗೆ ನೀಡಿದೆ. ಇದು ನನ್ನ ವಿರುದ್ದ ನಡೆಯುತ್ತಿರುವ ಷಡ್ಯಂತ್ರ. ನಾನು ಯಾವುದಕ್ಕೂ ಹೆದರಿ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ನ್ಯಾಯಾಂಗಕ್ಕೆ ಗೌರವಕೊಡುತ್ತೇನೆ ನ್ಯಾಯಾಂಗ ಶಾಸಕಾಂಗಕ್ಕೆ ಗೌರವ ಕೊಡುವುದು ಗೊತ್ತಿದೆ. ನನಗೂ ಸಮಯ ಪ್ರಜ್ಞೆ ಇದೆ. ಇಂದು ಮಧ್ಯಾಹ್ನ 1 ಗಂಟೆಗೆ ಇಡಿ ವಿಚಾರಣೆಗ ಹಾಜರಾಗಲು ಆಗಲ್ಲ. ಆದರೆ ಇಂದೇ ವಿಚಾರಣೆ ಹಾಜರಾಗುತ್ತೇನೆ ಎಂದು ಡಿ.ಕೆ ಶಿವ ಕುಮಾರ್ ತಿಳಿಸಿದರು.
Key words: I’m not – scared –person-Fighting – law-ED-Former Minister -DK Sivakumar