ಮೈಸೂರು,ಆ,30,2019(www.justkannada.in) ಮೈಸೂರು ದಸರಾ ಅಂಗವಾಗಿ ಈ ಬಾರಿ ಹೊಸತನದ ಸ್ತಬ್ಧಚಿತ್ರಗಳನ್ನ ಸಿದ್ಧಪಡಿಸಿ ಮೈಸೂರಿಗೆ ತಲುಪಿಸಿ ಎಂದು ಎಲ್ಲಾ ಜಿಲ್ಲೆಯ ಅಧಿಕಾರಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.
ದಸರಾ ಸ್ತಬ್ದಚಿತ್ರ ಕುರಿತಂತೆ ಸಚಿವ ವಿ. ಸೋಮಣ್ಣ, ರಾಜ್ಯದ ಎಲ್ಲಾ ಜಿಲ್ಲೆಗಳ ಸಿಇಒ ಗಳೊಂದಿಗೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫಿರನ್ಸ್ ನಡೆಸಿದರು. ದಸರಾ ಸಂಬಂಧಿತ ವಿಚಾರಗಳ ಜೊತೆ ವಿಡಿಯೋ ಕಾನ್ಫಿರನ್ಸ್ ಮೂಲಕ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.
ಈ ವೇಳೇ ಪ್ರತಿ ಜಿಲ್ಲೆಗಳಿಂದ ದಸರಾ ಸ್ತಬ್ದಚಿತ್ರ ತಯಾರಿಸಬೇಕು. ಈ ಬಾರಿ ಹೊಸತನದ ಸ್ತಬ್ದ ಚಿತ್ರಗಳನ್ನ ನಿರ್ಮಿಸಿ ಅಕ್ಟೋಬರ್ 5ರ ಒಳಗೆ ಸಿದ್ದಪಡಿಸಿ ಮೈಸೂರಿಗೆ ತಲುಪಿಸಿ ಎಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಚಿವ ವಿ. ಸೋಮಣ್ಣ ಸೂಚಿಸಿದರು. ಈ ಬಾರಿ ಹೊಸತನ ಬಳಸಿ, ಮಂಗಳಯಾನ ಸ್ತಬ್ದ ಚಿತ್ರ ನಿರ್ಮಿಸಿ ಎಂದು ಬೆಂಗಳೂರು ಜಿಲ್ಲೆಯ ಸಿಇಒ ಅವರಿಗೆ ಮಾರ್ಗದರ್ಶನ ನೀಡಿದರು.
ಈ ಬಾರಿ ತುಮಕೂರು ಜಿಲ್ಲಾಧಿಕಾರಿಗಳಿಗೆ ಸಿದ್ದಗಂಗಾ ಶ್ರೀ ಗಳ ಚಿತ್ರ ರಚಿಸಿ, ಇದು ಮುಖ್ಯಮಂತ್ರಿಗಳಿಗೂ ಇಷ್ಟ ಆಗತ್ತೆ. ಕೊಡಗು ಜಿಲ್ಲೆಯ ಅಧಿಕಾರಿಗಳು ಗುಡ್ಡ ಕುಸಿತ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಸ್ತಬ್ದಚಿತ್ರ ನಿರ್ಮಿಸಿ ಎಂದು ಸಚಿವ ವಿ. ಸೋಮಣ್ಣ ಮನವಿ ಮಾಡಿದರು.
ನಾನು ಸಚಿವನಾದರೂ ವಿನಂತಿ ಮಾಡಿಕೊಳ್ಳುತ್ತೇನೆ. ಒಟ್ಟಾರೆ ಈ ಬಾರಿಯ ದಸರಾದಲ್ಲಿ ನಿಮ್ಮೆಲ್ಲರ ಸಹಕಾರವು ಅಗತ್ಯ. ನೀವೆಲ್ಲರೂ ಬುದ್ದಿವಂತರಿದ್ದಿರಿ ನಿಮಗೆ ಸ್ವಾತಂತ್ರ್ಯ ಇದೆ . ಒಟ್ಟಾರೆ ಒಳ್ಳೆಯ ಕೆಲಸ ನಿಮ್ಮಿಂದ ನಿರೀಕ್ಷಿಸಿದ್ದೇನೆ ಎಂದು ತಿಳಿಸಿದ ಸಚಿವ ಸೋಮಣ್ಣ ಎಲ್ಲಾ ಜಿಲ್ಲೆಗಳ ಅಧಿಕಾರಿಗಳನ್ನ ನೀವು ಬನ್ನಿ ದಸರಾಗೆ ಎಂದು ನಗು ನಗುತ್ತಲೇ ಆಹ್ವಾನ ನೀಡಿದರು.
ಇನ್ನು ವಿಡಿಯೋ ಕಾನ್ಫಿರನ್ಸ್ ನಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್. ಸಿಇಒ ಕೆ. ಜ್ಯೋತಿ ಮತ್ತಿತರರು ಭಾಗಿಯಾಗಿದ್ದರು.
Key words: Prepare –new-tablo- Minister -V, Somanna- instructed – officials – video conference.