ಬೆಂಗಳೂರು,ಆಗಸ್ಟ್,10,2023(www.justkannada.in): ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ 15 % ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದರು.
ಈ ಕುರಿತು ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಕೆಂಪಣ್ಣ ನಮ್ಮ ಕಾಲದಲ್ಲಿ ನಮ್ಮ ವಿರುದ್ಧ ಪತ್ರ ಬರೆದಿದ್ರು . ಈಗಲೂ ಅದೇ ರೀತಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆಯಲಿ. ಆಗ ಕೆಂಪಣ್ಣ ಅವರ ಹೋರಾಟ ಒಪ್ಪೋಣ ಎಂದರು.
ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ದ ಹರಿಹಾಯ್ದ ಆರ್.ಅಶೋಕ್, ನಿಮ್ಮದು ಬ್ರ್ಯಾಂಡ್ ಬೆಂಗಳೂರೋ ಅಥವಾ ಬ್ಯಾಗ್ ಬೆಂಗಳೂರೋ..? ಕೆಲಸ ನಿಂತರೇ ಹೇಗೆ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ ಎಂದು ಕಿಡಿಕಾರಿದರು.
ಸರ್ಕಾರ ಬಂದ ಮೇಲೆ ಸ್ಕಾಂಡಲ್ ಶುರುವಾಗಿದೆ. ವರ್ಗಾವಣೆ ದಂಧೆ, ಕಮಿಷನ್ ಆರೋಪವಿದೆ. ಒಂದೇ ಒಂದು ಸಾಕ್ಷಿ ನೀಡದೆ ನಮ್ಮ ಮೇಲೆ ಆರೋಪ ಮಾಡಿದ್ದರು. ಮಾನನಷ್ಟ ಮೊಕ್ಕದಮ್ಮೆ ಹಾಕಿದಾಗಲೂ ಸಾಕ್ಷಿ ಕೊಡಲಿಲ್ಲ. ಈಗ ತನಿಖೆಗೆ ಕೊಡಿ ಎಂದು ಮಾಜಿ ಸಚಿವ ಆರ್ ಅಶೋಕ ಹೇಳಿದರು.
Key words: Commission-allegation -against -DK Shivakumar-Kempanna – letter- Former Minister -R. Ashok.