ಕಲಬುರಗಿ,ಆಗಸ್ಟ್,11,2023(www.justkannada.in): ಗುತ್ತಿಗೆದಾರರ ಬಳಿ ಕಮಿಷನ್ ಗೆ ಬೇಡಿಕೆ ಇಟ್ಟಿಲ್ಲ ಎಂದು ದೇವರ ಬಳಿ ಪ್ರಮಾಣ ಮಾಡಲಿ ಎಂದು ಹೇಳಿದ್ದ ಬಿಜೆಪಿ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾರು ನಂಬುತ್ತಾರೆ ಅವರು ಆಣೆ ಪ್ರಮಾಣ ಮಾಡುತ್ತಾರೆ. ಬಿಜೆಪಿಯವರು ಕೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. ನಾವು ಹಗರಣಗಳ ಬಗ್ಗೆ ಸಾಕ್ಷಿ ಇಟ್ಟು ಮಾತನಾಡಿದ್ದೇವು. ಪ್ರಮಾಣ ಮಾಡಿ ಏನು ಮಾಡುವುದು ಇದೆ. ದೇವಸ್ಥಾನಕ್ಕೆ ಯಾಕೆ ಕೋರ್ಟ್ಗೆ ಹೋಗೋಣ ಬನ್ನಿ ಎಂದು ಸವಾಲು ಹಾಕಿದರು.
ಸಂವಿಧಾನವಿದೆ, ಕಾನೂನು ಇದೆ ಅದನ್ನು ಬಿಟ್ಟು ಈ ದೇವಸ್ಥಾನಕ್ಕೆ ಬನ್ನಿ, ಆ ದೇವಸ್ಥಾನಕ್ಕೆ ಬನ್ನಿ ಅಂದರೆ ಜನರಿಗೆ ಅದರಿಂದ ನೆಮ್ಮದಿ ಸಿಗುತ್ತಾ ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ನ್ಯಾಯ ಕೊಡಿಸಬೇಕು ಅಂದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ನಾವು ಹೇಗೆ ದಾಖಲೆ ಇಟ್ಟು ಕೋರ್ಟ್ ಗೆ ಹೋಗಿದ್ದೇವೋ ಅದೇ ರೀತಿ ಬಿಜೆಪಿ ದಾಖಲೆ ಇಟ್ಟುಕೊಂಡು ಕೋರ್ಟ್ಗೆ ಹೋಗಲಿ ಎಂದು ಟಾಂಗ್ ನೀಡಿದರು.
Key words: court -temple – minister -Priyank Kharge – BJP.