ಬೆಂಗಳೂರು,ಆಗಸ್ಟ್,24,2023(www.justkannada.in): ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಲ್ಯಾಂಡ್ ಆಗಿದ್ದು, ಸಂಜೆ ನಿಗಧಿತ 6:04ರ ಸಮಯದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಚಂದ್ರಯಾನ ಯಶಸ್ವಿಯಾದ ಹಿನ್ನೆಲೆ ಆಗಸ್ಟ್ 26ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಅಲ್ಲಿನ ಜೊಹಾನ್ಸ್‌ಬರ್ಗ್‌ನಲ್ಲಿದ್ದಾರೆ. ಆಗಸ್ಟ್ 26 ರಂದು ಅಲ್ಲಿಂದಲೇ ಅವರು ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಆಗಸ್ಟ್ 26ರ ಬೆಳಿಗ್ಗೆ 5.55 ಕ್ಕೆ ಹೆಚ್ಎಎಲ್ ಗೆ ಪ್ರಧಾನಿ ಮೋದಿ ಆಗಮಿಸಲಿದ್ದು 6.30ರವರೆಗೆ ಹೆಚ್ ಎಎಲ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಇಸ್ರೋಗೆ ಭೇಟಿ ನೀಡಿ 8 ಗಂಟೆವರೆಗೆ ಸಭೆ ನಡೆಸಲಿದ್ದಾರೆ. ನಂತರ 8.35ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
Key words: Chandrayaan-3 -success – PM -Modi -Bangalore – August 26.