ಬೆಂಗಳೂರು,ಆಗಸ್ಟ್,25,2023(www.justkannada.in): ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದರು.
ಸಿಎಂ ಸರ್ಕಾರಿ ನಿವಾಸದಲ್ಲಿ ಸಿದ್ಧರಾಮಯ್ಯರನ್ನ ಭೇಟಿಯಾದ ಎಂ.ಪಿ ರೇಣುಕಾಚಾರ್ಯ, 20 ನಿಮಿಷಗಳ ಕಾಲ ಜೊತೆ ಚರ್ಚೆ ಮಾಡಿದ್ದು, ಕ್ಷೇತ್ರದ ಸಂಬಂಧ ಚರ್ಚೆ ನಡೆಸಿ ತೆರಳಿದ್ದಾರೆ.
ಬಳಿಕ ಈ ಕುರಿತು ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ಬರದ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿ ಬಂದಿದ್ದೇನೆ. ಇಂದು ವರಮಹಾಲಕ್ಷ್ಮಿ ಪೂಜೆ ಯಡಿಯೂರಪ್ಪ, ಕೃಷ್ಣ ಬೈರೇಗೌಡ ರನ್ನೂ ಭೇಟಿಯಾಗಿರುವೆ ಎಂದರು.
ರಾಜಕೀಯವೇ ಬೇರೆ, ಪರಸ್ಪರ ವಿಶ್ವಾಸವೇ ಬೇರೆ. ರಾಜಕೀಯೇತರ ಹಲವು ವಿಚಾರಗಳನ್ನು ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಅವರೂ ಕೂಡ ನನ್ನನ್ನು ಪಕ್ಷ ಸೇರ್ಪಡೆ ಆಗುವಂತೆ ಆಹ್ವಾನ ನೀಡಿಲ್ಲ. ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
Key words: Former MLA- MP Renukacharya -met – discussed- CM Siddaramaiah